ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ; ತ್ಯಾಗ, ಬಲಿದಾನಿಗಳ ಸಂಸ್ಮರಣೆ

ಯಲಹಂಕ: ಜ. 9ರಿಂದ 19ರ ವರೆಗೂ ಕನಕಪುರದ ಮೇಕೆದಾಟುವಿನಿಂದ ಬೆಂಗಳೂರಿನ ಬಿಡದಿವರೆಗೂ, ಬಿಡದಿಯಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದ ವರೆಗೂ 10 ದಿನಗಳ ಪಾದಯಾತ್ರೆಗೆ ಕಾಂಗ್ರೆಸ್ ಯೋಜಿಸಿದ್ದು, ಇಂದು ಕಾಂಗ್ರೆಸ್ ಪಕ್ಷ ತನ್ನ ಸಂಸ್ಥಾಪನಾ ದಿನವನ್ನು ಆಚರಿಸಿತು.

ಈ ಸಂದರ್ಭ ದೇಶ ಹಾಗೂ ಪಕ್ಷಕ್ಕಾಗಿ ತ್ಯಾಗ- ಬಲಿದಾನಗೈದ ಮಹನೀಯರನ್ನು ಸ್ಮರಿಸಲಾಯಿತು. ಯಲಹಂಕ ತಾಲೂಕಿನ‌ ಬ್ಯಾಟರಾಯನಪುರದ ಸಂಪಿಗೇಹಳ್ಳಿಯಲ್ಲಿ ನೂರಾರು ಕಾರ್ಯಕರ್ತರ ಸಮಕ್ಷಮ ಸಂಸ್ಥಾಪನಾ ದಿನಾಚರಣೆ ಜರುಗಿತು.

ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಸದಸ್ಯ ರವಿ ಹಾಗೂ ಕೋಲಾರದ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.

ಈ ವೇಳೆ ಬ್ಯಾಟರಾಯನಪುರ ಶಾಸಕ ಕೃಷ್ಣಭೈರೇಗೌಡ ಮಾತನಾಡಿ "ಮಳೆ, ನೆರೆಹಾವಳಿ, ಕೊರೊನಾದಿಂದ ಅಸು ನೀಗಿದವರಿಗೆ ಬಿಜೆಪಿ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ. ಅಭಿವೃದ್ಧಿ ಮಾಡಲು ಇವರಿಗೆ ಸಮಯವೇ ಇಲ್ಲ. ಆದರೆ, ರಾಜ್ಯದಲ್ಲಿ ಶೇ.40 ಕಮಿಷನ್ ಲೂಟಿ ಮಾಡಲು ಇವರೆಲ್ಲ ಪಣತೊಟ್ಟು ನಿಂತಿದ್ದಾರೆ" ಎಂದು ಹರಿಹಾಯ್ದರು.

Edited By : Nagesh Gaonkar
Kshetra Samachara

Kshetra Samachara

29/12/2021 07:31 am

Cinque Terre

398

Cinque Terre

0

ಸಂಬಂಧಿತ ಸುದ್ದಿ