ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊವೀಡ್ ನೆಪ, ವೃದ್ಧರ ಬಿಸಿಯೂಟಕ್ಕೆ ಕನ್ನ,ನೊಂದವರಿಂದ ಪ್ರತಿಭಟನೆ

ಬೆಂಗಳೂರು: ಅಸಂಘಟಿತ ವೃದ್ಧ ನಿವೃತ್ತ ಕಾರ್ಮಿಕರಿಗೆ ನೀಡುತ್ತಿದ್ದ ಮಧ್ಯಾಹ್ನದ ಬಿಸಿ ಊಟ ಕೋವಿಡ್ ನೆಪ ದಿಂದ ಕಳೆದ ಎರಡು ವರ್ಷಗಳಿಂದ ಕೊಡದೇ ಸರ್ಕಾರ ಸತಾಯಿಸುತ್ತಿದೆ. ಇದರಿಂದ ನೊಂದ ವೃದ್ದರು ಬಿಬಿಎಂಪಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರ ವೃದ್ಧರ ಬಿಸಿಯೂಟ ನಿಲ್ಲಿಸಿದ್ದು, ಬಿಸಿ ಊಟ ಕಾರ್ಯಕ್ರಮವನ್ನ ಪ್ರಾರಂಭಿಸಿ ಎಂದು ವಯೋ ವೃದ್ದರು ಬೇಡಿಕೆ ಇಟ್ಟಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ವಯೋ ವೃಧ್ದರ ಭಾವನೆಗಳನ್ನ ನಾನು ಅರ್ಥ ಮಾಡಿ ಕೊಳ್ಳುತ್ತೇನೆ, ಬಿಸಿ ಊಟವನ್ನ ಮತ್ತೆ ಪುನರ್ ಪ್ರಾರಂಭಿಸಲು ಏನೆಲ್ಲಾ ಕ್ರಮ ಕೈ ಗೊಳ್ಳಬೇಕೋ ಅದನ್ನು ಮಾಡಲಾಗುತ್ತೆ ಎಂದರು.

Edited By : Shivu K
Kshetra Samachara

Kshetra Samachara

28/12/2021 02:27 pm

Cinque Terre

356

Cinque Terre

0

ಸಂಬಂಧಿತ ಸುದ್ದಿ