ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಂಇಎಸ್‌ ನಿ‍ಷೇಧಕ್ಕೆ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಪರ ವಾಟಾಳ್ ಹೋರಾಟ

ಆನೇಕಲ್:ಎಂಇಎಸ್ ಸಂಘಟನೆಯನ್ನ ನಿಷೇಧಿಸಲೇಬೇಕು ಅಂತಲೇ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಆನೇಕಲ್ ಅತ್ತಿಬೆಲೆ ಗಡಿಭಾಗದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿದವು.

ಎಂಇಎಸ್ ನಿಷೇಧಿಸುವಂತೆ ಡಿಸೆಂಬರ್ 29ರ ವರೆಗೂ ಗಡುವು ನೀಡಲಾಗಿದೆ. ಒಂದು ವೇಳೆ ಸರ್ಕಾರ ಎಂಇಎಸ್ ನಿಷೇಧಿಸದೇ ಇದ್ದರೆ, ಡಿಸೆಂಬರ್-31 ರಂದು ಕರ್ನಾಟಕ ಬಂದ ಮಾಡಲಾಗುವುದ ಎಂದು ವಾಟಾಳ್ ನಾಗರಾಜ್ ಮತ್ತೆ ಎಚ್ಚರಿಸಿದರು.

ಜಯ ಕರ್ನಾಟಕ, ಕರಾವೇ, ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ಸೇರಿದಂತೆ ಸಾರಾ ಗೊವಿಂದ್, ಕೆ.ಆರ್ ಕುಮಾರ್, ಮಂಜುನಾಥ್ ದೇವಾ, ಪ್ರವೀಣ್ ಶೆಟ್ಟಿ ಮುಖಂಡರು ಅತ್ತಿಬೆಲೆ ಗಡಿಯಲ್ಲಿ ಹೆದ್ದಾರಿ ತಡೆಗೂ ಮುಂದಾದರು. ಆದರೆ ಪೊಲೀಸರು ಇವರನ್ನ ತಡೆದು ಬಂಧಿಸಿದರು.

Edited By : Shivu K
Kshetra Samachara

Kshetra Samachara

24/12/2021 03:52 pm

Cinque Terre

1.16 K

Cinque Terre

0

ಸಂಬಂಧಿತ ಸುದ್ದಿ