ಬೆಂಗಳೂರು: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮೇಲಿನ ಭೂ ಕಬಳಿಕೆ ಆರೋಪದ ಪ್ರಕರಣವನ್ನು ಇಂದು ಹೈಕೋರ್ಟ್ ವಿಚಾರಣೆ ನಡೆಸಿ, ಜನವರಿ ಎರಡನೇ ವಾರಕ್ಕೆ ಮುಂದೂಡಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಬಿ.ವಿ.ಆಚಾರ್ಯ ತಿಳಿಸಿದ್ದಾರೆ.
ಹೆಚ್ ಎಎಲ್ ಏರ್ ಪೋರ್ಟ್ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಎರಡು ಕಡೆ ವಾದ- ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಪ್ರಕರಣವನ್ನು ಮುಂದೂಡಿದ್ದಾರೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಯಾವುದೇ ಎಫ್ ಐಆರ್ ದಾಖಲಾಗಿಲ್ಲ. ಇದೊಂದು ಖಾಸಗಿ ಪ್ರಕರಣವಾಗಿದ್ದು, ಕೋರ್ಟ್ ನ ಸಮನ್ಸ್ ಇಟ್ಟುಕೊಂಡು ಸಚಿವರ ರಾಜೀನಾಮೆ ಕೇಳ್ತಾ ಇದ್ದಾರೆ ಎಂದರು.
Kshetra Samachara
22/12/2021 10:10 pm