ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಎಸ್. ರವಿ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಸ್ ರವಿ ಗೆಲುವು ಸಾಧಿಸಿದ್ದಾರೆ, ಪ್ರತಿಸ್ವರ್ಥಿ ಜೆಡಿಎಸ್ ಪಕ್ಷದ ಅಭ್ಯರ್ಥಿ ರಮೇಶ್ ಗೌಡರನ್ನ 722 ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ.

ಡಿಸೆಂಬರ್ 10 ರಂದು ವಿಧಾನ ಪರಿಷತ್ ಚುನಾವಣೆಯ ಮತದಾನ ನಡೆದಿದ್ದು, ಇಂದು ಮತಗಳ ಎಣಿಕೆ ಕಾರ್ಯ ಮಾಡಲಾಯಿತು, ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಕ್ಷೇತ್ರದ ಮತಗಳ ಎಣಿಕೆ ಕಾರ್ಯ ದೇವನಹಳ್ಳಿ ಪಟ್ಪಣದ ಆಕಾಶ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಮಾಡಲಾಗಿದ್ದು, ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್ ರವಿ ಜಯಭೇರಿ ಭಾರಿಸಿದ್ದಾರೆ, ತಮ್ಮ ಪ್ರತಿಸ್ವರ್ಥಿ ಅಭ್ಯರ್ಥಿ ಜೆಡಿಎಸ್ ಪಕ್ಷದ ರಮೇಶ್ ಗೌಡರನ್ನ 722 ಮತಗಳ ಅಂತರದಿಂದ ಸೊಲಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಕ್ಷೇತ್ರ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ, ಚುನಾವಣೆಯಲ್ಲಿ

3919 ಸ್ಥಳೀಯ ಸಂಸ್ಥೆಗಳ ಸದಸ್ಯರು ತಮ್ಮ ಮತಗಳನ್ನ ಚಲಾಯಿಸಿದ್ದರು, ಇದರಲ್ಲಿ 56 ಮತಗಳು ಅಸಿಂಧು ಆಗಿವೆ, ಸಿಂಧುವಾದ 3856 ಮತಗಳ ಎಣಿಕೆ ಮಾಡಲಾಗಿ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ 2262 ಮತಗಳನ್ನ ಪಡೆದಿದ್ದಾರೆ, ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ 1540 ಮತಗಳನ್ನ ಪಡೆದಿದ್ದಾರೆ ಮತ್ತು ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ 54 ಮತಗಳನ್ನ ಪಡೆದಿದ್ದಾರೆ.

ಚುನಾವಣೆಯಲ್ಲಿ ಗೆಲವು ಸಾಧಿಸಿದ ಎಸ್ ರವಿ ಮಾಧ್ಯಮದೊಂದಿಗೆ ಮಾತನಾಡುತಾ ಮೊದಲಿಗೆ ಬೆಳಗಾವಿ ಆಧಿವೇಶನದಲ್ಲಿರುವ ಡಿಕೆಶಿವಕುಮಾರ್ ಅರ್ಶಿವಾದ ಪಡೆಯಲು ಬೆಳಗಾವಿಗೆ ಹೋಗುವೆ, ಚುನಾವಣೆಯಲ್ಲಿ ಮದ್ದುಗುಂಡುಗಳ ಬಳಕೆಯಾಗಿರುವುದು ನಿಜ ಆದರೆ ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಂದ ಗೆಲುವು ಸಿಕ್ಕಿದೆ, ಕುಮಾರಸ್ವಾಮಿಯವರ ರಣತಂತ್ರ ಈ ಚುನಾವಣೆಯಲ್ಲಿ ಫಲಿಸಿಲ್ಲ, ಕುಮಾರಸ್ವಾಮಿಯವರೇ ನೇರವಾಗಿ ಚುನಾವಣೆ ಮಾಡಿದ್ರು ನಮ್ಮ ಕಾರ್ಯಕರ್ತರು ಎದೆಗುಂದದೆ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸಿದ್ದಾರೆ ಎಂದರು.

Edited By : Manjunath H D
Kshetra Samachara

Kshetra Samachara

14/12/2021 04:13 pm

Cinque Terre

1.57 K

Cinque Terre

0

ಸಂಬಂಧಿತ ಸುದ್ದಿ