ಕೆ.ಆರ್ ಪುರ: ಕಾಶಿ ವಿಶ್ವನಾಥ ಧಾಮ ಸುಂದರ ಧಾರ್ಮಿಕ ನಗರವಾಗಿ ಕಂಗೊಳಿಸುತ್ತಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿಯವರು ಕೆ.ಆರ್. ಪುರದ ಶ್ರೀಮಹಾಬಲೇಶ್ವರ ದೇವಸ್ಥಾನದಲ್ಲಿ ಮೊದಲ ಹಂತದ ಲೋಕಾರ್ಪಣೆ "ಭವ್ಯ ಕಾಶಿ- ದಿವ್ಯ ಕಾಶಿ" ಕಾರ್ಯಕ್ರಮವನ್ನು ಬಿಜೆಪಿಯ ನೂರಾರು ಕಾರ್ಯಕರ್ತರು ನೇರ ಪ್ರಸಾರದಲ್ಲಿ ವೀಕ್ಷಿಸಿದರು.
ಬಳಿಕ ಕೆ.ಆರ್. ಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಶಿವರಾಜ್ ಮಾತನಾಡಿ, ಲೋಕಸಭೆ ಚುನಾವಣೆಯ ಮುಂಚೆ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆಯೇ ಎಲ್ಲ ಕಾರ್ಯ- ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಒಂದೊಂದಾಗಿ ಈಡೇರಿಸುತ್ತಿದ್ದಾರೆ. ಜಮ್ಮುಕಾಶ್ಮೀರಕ್ಕಿದ್ದ 370 ಕಲಂ ರದ್ದತಿ, ಶ್ರೀ ರಾಮಮಂದಿರ ನಿರ್ಮಾಣ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಮಾಡುವ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು. ಸಂದೇಶ ಸ್ವಾಮೀಜಿ ಹಾಗೂ ಹರ ನಾಗರಾಜ್ ಆಚಾರ್ಯ ಉಪಸ್ಥಿತರಿದ್ದರು.
Kshetra Samachara
13/12/2021 06:10 pm