ಬೆಂಗಳೂರು: ಜಮೀನು ಅವ್ಯವಹಾರ ಮಾಡಿರೋ ಆರೋಪ ಸತ್ಯಕ್ಕೆ ದೂರವಾದ್ದು ಎಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಸ್ಪರ್ಧಿ ಕೆಂಚಪ್ಪಗೌಡ ಸಮಜಾಯಿಷಿ ನೀಡಿದ್ದಾರೆ.
ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಗೆಲುವಿಗಾಗಿ ನನ್ನ ಮೇಲೆ ಇಲ್ಲಸಲ್ಲದ , ಆಧಾರ ರಹಿತ ಆರೋಪ ಎದುರಾಳಿಗಳು ನಡೆಸುತ್ತಿದ್ದಾರೆ.
ನನ್ನ ಆಡಳಿತ ಅವಧಿಯಲ್ಲಿ ನಾನು ಅವ್ಯವಹಾರ ನಡೆಸಿದ್ದರೇ ಕಾನೂನು ಕ್ರಮ ಜರುಗಿಸಬಹುದಿತ್ತು.
ಆದರೆ ಸುಳ್ಳು ಅರೋಪದ ಮೂಲಕ ನನ್ನ ತೇಜೋವಧೆ ಮಾಡುತ್ತಿರುವ ಅಪ್ಪಾಜಿಗೌಡ, ನಾಗರಾಜ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.
ಒಕ್ಕಲಿಗರ ಸಂಘಕ್ಕೆ ಸೇರಿದ ಸಜ್ಜೆಪಾಳ್ಯ ಭೂಮಿಯನ್ನು ಬೈಲಾ ವಿರುದ್ಧ ಪರಬಾರೆ ಕೆಂಚಪ್ಪಗೌಡ ಅವಧಿಯಲ್ಲಿ ಮಾಡಿರುವ ಆರೋಪವನ್ನು ಅಪ್ಪಾಜಿಗೌಡ ಟೀಂ ಮಾಡುತ್ತಿದೆ.
Kshetra Samachara
11/12/2021 03:30 pm