ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಕುಂಠಿತ, ವೆಂಕಟಸ್ವಾಮಿ ಭೇಟಿ

ಬೆಂಗಳೂರು : ಪೂರ್ವ ತಾಲ್ಲೂಕು ವ್ಯಾಪ್ತಿಯ ಮಹದೇವಪುರ ಗ್ರಾಮದ ಸರ್ವ್ ನಂ 199 ರಲ್ಲಿ 2.20 ಎಕರೆ ಬಂಡೆ ಕರಾಬು ಜಾಗದಲ್ಲಿ ಅಂಬೇಡ್ಕರ್ ಭವನ ಮಂಜೂರಾತಿಯಾಗಿದ್ದು ಆ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗದಿರುವ ಕಾರಣ ಸ್ಥಳಕ್ಕೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಪ್ರತಿಕ್ರಿಯೆ ನೀಡಿದ ಅವರು ಮಹದೇವಪುರ ಗ್ರಾಮದ 2.20 ಎಕರೆ ಬಂಡೆ ಕರಾಬು ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು 2009- 2010 ನೇಯ‌ ಇಸವಿಯಲ್ಲಿ ಅಂದಿನ ಮುಖ್ಯ ಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಗುದ್ದಲಿ ಪೂಜೆ ನೆರವೇರಿಸಿ ಅಂಬೇಡ್ಕರ್ ಭವನ ನಿರ್ಮಿಸಲು 8 ಕೋಟಿ ರೂ ಅನುದಾನವು ಮಂಜೂರಾತಿ ಮಾಡಿದ್ದರು.... ಆದರೆ ಕಾಮಗಾರಿ ಇನ್ನೂ ಮುಗಿಯದೇ ಕುಂಠಿತವಾಗಿದ್ದು..ಅಂದು ಬಿಡುಗಡೆಯಾಗಿದ್ದ 8 ಕೋಟಿ ಮಂಜೂರಾತಿ ಆಗಿದ್ದ ಹಣ ಸಮಾಜ ಕಲ್ಯಾಣ ಇಲಾಖೆಯಲ್ಲಿ 80 ಲಕ್ಷ ಮಾತ್ರ ಉಳಿದಿದ್ದು, ಬಾಕಿ ಉಳಿಕೆಯ ಹಣ ಹಗರಣವಾಗಿದೆ ಎಂದು ಆರೋಪಿಸಿದರು.. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕಾಗಿದೆ ಎಂದು ದೂರಿದರು. ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ಯುವ ಘಟಕದ ರಾಜ್ಯಾಧ್ಯಕ್ಷರಾದ DM ಅಂಬರೀಶ್, ಬೆಂಗಳೂರು ನಗರ ಯುವ ಘಟಕದ ಅಧ್ಯಕ್ಷ ದಲಿತ ಚಳುವಳಿ ನಾಗೇಶ್ ಜೊತೆಗಿದ್ದರು.

Edited By : Nagesh Gaonkar
Kshetra Samachara

Kshetra Samachara

05/12/2021 07:55 pm

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ