ವರದಿ - ಗಣೇಶ್ ಹೆಗಡೆ
ಬೆಂಗಳೂರು -ನಗರದ ಇತಿಹಾಸ ಪ್ರಸಿದ್ಧಿ ದೊಡ್ಡ ಗಣೇಶ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಕಡಲೆಕಾಯಿ ಪರಿಷೆ ಜಾತ್ರಾ ಮಹೋತ್ಸವ ಜರುಗಿತು.
ಕಾರ್ತಿಕ ಮಾಸದ ಕೊನೆಯ ಸೋಮವಾರ ಆರಂಭವಾಗಿ ನಿನ್ನೆ ಮುಕ್ತಾಯವಾಯಿತು.ಪರಿಷೆಗೆ ರಾಜ್ಯದ ನಾನ ಭಾಗಗಳಿಂದ ಲಕ್ಷಂತರ ಭಕ್ತರು ಭಾಗಿಯಾಗಿದ್ದರು.
ಅದ್ರೆ, ವಿಷಯ ಇದಲ್ಲ,, ಪರಿಷೆ ಹೆಸರಲ್ಲಿ ಲಕ್ಷಂತರ ಹಣ ಮುಜರಾಯಿ ಇಲಾಖೆ ಲೂಟಿ ಮಾಡುತ್ತಿದೆ.ಪರಿಷೆಯಲ್ಲಿ 5 ಸಾವಿರಕ್ಕೂ ಅಧಿಕ ತಾತ್ಕಾಲಿಕ ಅಂಗಡಿಗಳು ನಿರ್ಮಾಣ ಮಾಡಿ ವ್ಯಾಪಾರ ಮಾಡ್ತಾರೆ.ಪಾಲಿಕೆ ಜಾಗ ಸೇರಿದಂತೆ ರಸ್ತೆಗಳನ್ನೂ ಬಂದ್ ಮಾಡಿ ,ದೇವಸ್ಥಾನದ ಸುತ್ತಮುತ್ತ ಸುಮಾರು 2 ಕಿ, ಮೀಟರ್ ರಸ್ತೆಯಲ್ಲಿ ಅಂಗಡಿ ನಿರ್ಮಿಸಿ ವ್ಯಾಪಾರ ಮಾಡ್ತರೆ.
ರಾಜ್ಯ ಸೇರಿದಂತ ತಮಿಳುನಾಡಿ ನಿಂದ ವ್ಯಾಪಾರಸ್ಥರು ಕಡೆಲೆಕಾಯಿ, ಕಡ್ಲೆಪುರಿ, ವಿವಿಧ ಬಗ್ಗೆಯ ಅಟೀಕೆ ಸಾಮನುಗಳನ್ನೂ ವ್ಯಾಪಾರ ಮಾಡ್ತಾರೆ. ಮೂರು ದಿನಗಳ ಈ ಪರಿಷೆಯಾಲ್ಲಿ ಸುಮಾರು ಐದು ಕೋಟಿಗೂ ಅಧಿಕ ವ್ಯಾಪಾರ ವಹಿವಟ್ಟು ನಡೆಯುತ್ತೆ ,ಅದ್ರೆ ಈ ವ್ಯಾಪಾರಕ್ಕೆ ಅಂತ ನಿರ್ಮಾಸಿದ ತಾತ್ಕಲಿಕ ಅಂಗಡಿಗಳ ತೆರಿಗೆ ಮಾತ್ರ ಮುಜರಾಯಿ ಇಲಾಖೆ ವಸೂಲಿ ಮಾಡಿಕೊಂಡು ಬಿಬಿಎಂಪಿಗೆ ಪಂಗನಾಮ ಹಾಕ್ತತಿದೆ.
ವಿಪರ್ಯಾಸವೆಂದರೇ ಪರಿಷೆ ಯಿಂದ ಅಗುವ ಕಸವನ್ನು ಪಾಲಿಕೆ ಸ್ವಚ್ಛಗೊಳಿಸಬೇಕು. ಪಾಲಿಕೆ ಜಾಗ ಹಣ ವಸೂಲಿ ಮಾತ್ರ ಮುಜರಾಯಿ ಇಲಾಖೆ.ಇದು ಯಾವ ನ್ಯಾಯ ಎಂಬ ಪ್ರಶ್ನೆ ಮೂಡುತ್ತಿದೆ. ಪ್ರತಿ ಮಳಿಗೆಯಿಂದ ಮುಜರಾಯಿ ಇಲಾಖೆ 5 ಸಾವಿರ ರೂ. ಹಣ ಪಡೆಯುತ್ತದೆ. ಇದರಿಂದ ಕೋಟ್ಯಂತರ ಆದಾಯ ಮುಜರಾಯಿ ಇಲಾಖೆಗೆ ಬರಲಿದೆ.
Kshetra Samachara
02/12/2021 04:51 pm