ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಸಕ ವಿಶ್ವನಾಥ್ ಕೊಲೆ ಸಂಚು ವಿರೋಧಿಸಿ ಪ್ರತಿಭಟನೆ, ಟ್ರಾಫಿಕ್ ಜಾಮ್

ಯಲಹಂಕ: ಶಾಸಕ ಎಸ್. ಆರ್. ವಿಶ್ವನಾಥ್ ಕೊಲೆಗೆ ಸಂಚು ನಡೆಸಿದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೋಪಾಲಕೃಷ್ಣ ವಿರುದ್ಧ ಶಾಸಕ ವಿಶ್ವನಾಥ್ ಬೆಂಬಲಿಗರು ಇಂದು ಪ್ರತಿಭಟನೆ ನಡೆಸಿದರು.

ಯಲಹಂಕದ ಎನ್ ಇಎಸ್ ಸರ್ಕಲ್ ಮತ್ತು ರಾಜಾನುಕುಂಟೆ ಸರ್ಕಲ್ ಬಳಿ ಶಾಸಕರ ಬೆಂಬಲಿಗರು ಪ್ರತಿಭಟನೆ ನಡೆಸಿ, ಗೋಪಾಲಕೃಷ್ಣ ಭಾವಚಿತ್ರಕ್ಕೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಕೊಲೆಗಡುಕ ಗೋಪಾಲಕೃಷ್ಣನಿಗೆ ಧಿಕ್ಕಾರ ಎಂದು ಕೂಗಿದರು.

ಪ್ರತಿಭಟನೆಯಿಂದಾಗಿ ಯಲಹಂಕ - ದೊಡ್ಡಬಳ್ಳಾಪುರ ರಸ್ತೆ ಬಂದ್ ಆಗಿ ಟ್ರಾಫಿಕ್ ಜಾಮ್ ಉಂಟಾಯಿತು. ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಟ್ರಾಫಿಕ್ ಪೊಲೀಸರು ಹರಸಾಹಸವನ್ನೇ ಪಟ್ಟರು.

Edited By : Manjunath H D
Kshetra Samachara

Kshetra Samachara

02/12/2021 12:06 pm

Cinque Terre

430

Cinque Terre

0

ಸಂಬಂಧಿತ ಸುದ್ದಿ