ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆರೆಗಳ ಸಂರಕ್ಷಣೆಗಾಗಿ ಪ್ರತಿಭಟನೆ

ಆನೇಕಲ್ : ಕಳೆದ ಹಲವು ದಿನಗಳಿಂದ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆನ್ನಾಗರ ಕೆರೆ ಸುದ್ದಿಯಲ್ಲಿದೆ.ಮೊನ್ನೆಯಷ್ಟೇ ಕೆಮಿಕಲ್ ಮಿಶ್ರಿತ ನೀರಿನ ಕುರಿತಾಗಿ ಸುದ್ದಿ ವೈರಲ್ ಆಗಿದೆ.

ಇನ್ನು ಮಳೆಯಿಂದ ಸುತ್ತಮುತ್ತಲ ಬೆಳೆಗಳು ನಾಶವಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಕೆರೆಗಳ ಸಂರಕ್ಷಣೆ ಗಾಗಿ ಹೆನ್ನಾಗರ ಪಂಚಾಯತಿ ಸದಸ್ಯರು ಹಾಗೂ ಸಾರ್ವಜನಿಕರು ಇಂದು ಬೃಹತ್ ಪ್ರತಿಭಟನಾ rallyಯನ್ನು ನಡೆಸಿದ್ದಾರೆ.

ಸುಮಾರು 200ಕ್ಕೂ ಹೆಚ್ಚು ಮಂದಿ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಕೆರೆಗಳ ಸಂರಕ್ಷಣೆಗೆ ಅಧಿಕಾರಿಗಳು ಹಾಗೂ ಜನನಾಯಕರು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಹೆನ್ನಾಗರ ಗ್ರಾಮ ಪಂಚಾಯತಿಯ ಗ್ರಾಮಗಳಾದ ಹಿನ್ನಕ್ಕಿ, ಮಾಸ್ತೇನಹಳ್ಳಿ , ರಾಜಾಪುರ, ಕಾಚನಾಯಕಹಳ್ಳಿ ಸೇರಿದಂತೆ ಪಂಚಾಯತಿ ವ್ಯಾಪ್ತಿಯ ಅನೇಕ ಕೆರೆಗಳು ಕಲುಷಿತವಾಗಿದೆ.

ಪ್ರತಿಭಟನಾ rallyಯಲ್ಲಿ ಕಾಂಗ್ರೆಸ್ ಮುಖಂಡ ಆರ್ ಕೆ ರಮೇಶ್ ಮಾತನಾಡಿದರು.

Edited By : Shivu K
Kshetra Samachara

Kshetra Samachara

26/11/2021 07:58 pm

Cinque Terre

486

Cinque Terre

0

ಸಂಬಂಧಿತ ಸುದ್ದಿ