ದೊಡ್ಡಬಳ್ಳಾಪುರ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿ ವ್ಯಾಪ್ತಿಯ ದೈನಂದಿನ ತ್ಯಾಜ್ಯವನ್ನು ಪ್ರತಿದಿನ ನೂರಾರು ಲಾರಿಗಳ ಮುಖಾಂತರ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಭಕ್ತರಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಗರೇಹಳ್ಳಿಯ MSGP ಕಸ ನಿರ್ವಹಣಾ ಘಟಕಕ್ಕೆ ತಂದು ಸುರಿಯುತ್ತಿದ್ದು, ಈ MSGP ಘಟಕವನ್ನು ಕೂಡಲೇ ಮುಚ್ಚಬೇಕೆಂದು ನವ ಬೆಂಗಳೂರು ಹೋರಾಟ ಸಮಿತಿ ಆಗ್ರಹಿಸಿದೆ.
ಹೋರಾಟ ಸಮಿತಿಯು ಭಕ್ತರಹಳ್ಳಿ ಗ್ರಾಪಂ ಅಧ್ಯಕ್ಷರನ್ನೊಳಗೊಂಡ ಸರ್ವ ಸದಸ್ಯರ ಸಹಯೋಗ ಹಾಗೂ ಸ್ಥಳೀಯ ಗ್ರಾಪಂ ಸಹಕಾರದೊಂದಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.
ಈ ಧರಣಿಗೆ ಸುತ್ತಮುತ್ತಲಿನ ಗ್ರಾಮದ ರೈತರು ದೇಣಿಗೆ ನೀಡುವ ಮೂಲಕ ಚಾಲನೆ ನೀಡಿದರು. ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ.ವಿ. ಸತ್ಯ ಪ್ರಕಾಶ್ (ಸಾರಥಿ ), ಸಂಸ್ಥಾಪಕ ಅಧ್ಯಕ್ಷ ಜಿ.ಎನ್. ಪ್ರದೀಪ್ ಮತ್ತು ಭಕ್ತರಹಳ್ಳಿ ಗ್ರಾಪಂ ಅಧ್ಯಕ್ಷ ಕೆ. ಸಿದ್ದಲಿಂಗಯ್ಯ ನೇತೃತ್ವದಲ್ಲಿ ಧರಣಿ ಸಾಗಿದ್ದು, ಪರಿಸರದ ಗ್ರಾಮಗಳ ರೈತರು, ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಧರಣಿ ಸತ್ಯಾಗ್ರಹದೆಡೆ ಆಗಮಿಸುತ್ತಿದ್ದಾರೆ.
Kshetra Samachara
25/11/2021 03:25 pm