ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಪ್ರತಿಭಟನೆ

ಬೆಂಗಳೂರು: ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಬೃಹತ್ ಕಾಲ್ನಡಿಗೆ ಜಾಥಾವನ್ನು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿತ್ತು.... ಈ ಕಾಲ್ನಡಿಗೆ ಜಾತಾ ಆನೆಕಲ್ಲಿನ ವೆಂಕಟೇಶ್ವರ ಚಿತ್ರಮಂದಿರದಿಂದ ಶುರುವಾದ ಕಾಲ್ನಡಿಗೆ ಜಾಥಾ ತಾಲೂಕು ಕಚೇರಿ ವರೆಗು ನಡೆಸಿದ್ದು ನಂತರ ಆನೇಕಲ್ ತಲ್ಲೂಕು ಕಚೇರಿ ಮುಂಭಾಗ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಸಹ ಮಾಡಲಾಯಿತು ... ಪ್ರಜಾ ವಿಮೋಚನಾ ಚಳುವಳಿ ರಾಜ್ಯಾದ್ಯಕ್ಷ ರಾದ ಪಿವಿಸಿ ಕೃಷ್ಣ ಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಯಲ್ಲಿ ಸುಮಾರು ನೂರಕ್ಕು ಹೆಚ್ಚು ಮಂದಿ ಪ್ರತಿಭಟನಕಾರರು ಭಾಗವಹಿಸಿದ್ದರು ಈ ಪ್ರತಿಭಟನೆಯ ಪ್ರಮುಖ ಉದ್ದೇಶ ಆನೇಕಲ್ ನ ತಾಲ್ಲೂಕು ಕಚೇರಿಯಲ್ಲಿ ನಡೆಯುವ ಹಲವು ಬ್ರಷ್ಟಾಚಾರಗಳನ್ನು ತಡೆಯಬೇಕು , ದಲಿತ ಯುವಕ ಸುರೇಶ್ ಸಾವಿಗೆ ಸರಿಯಾದ ನ್ಯಾಯ ದೊರೆಯಬೇಕು ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ... ಬಡವರಿಗೆ ಸರಿಯಾದ ರೀತಿಯಲ್ಲಿ ಕಚೇರಿ ಯಲ್ಲಿ ಕೆಲಸಗಳಾಗಬೇಕು ಎಂದು ... ಈ ಕುರಿತು ಆನೇಕಲ್ ತಹಸೀಲ್ದಾರ್ ಗೆ ಪ್ರಜಾ ವಿಮೋಚನಾ ಚಳುವಳಿಯ ಪ್ರತಿಭಟನಾಕಾರರು ಮನವಿ ಪತ್ರವನ್ನು ಸಹ ನೀಡಿದ್ದು ಆನೇಕಲ್ ತಾಸಿಲ್ದಾರ್ ದಿನೇಶ್ ಮನವಿ ಪತ್ರವನ್ನು ಪಡೆದು ತಾಲೂಕು ಆಡಳಿತದ ಕುರಿತು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

23/11/2021 07:25 pm

Cinque Terre

592

Cinque Terre

0

ಸಂಬಂಧಿತ ಸುದ್ದಿ