ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಓವೈಸಿ ಕಸಬ್, ಬಿನ್ ಲಾಡೇನ್ ರೀತಿ ವರ್ತಿಸುತ್ತಿದ್ದಾರೆ : ಸಿಟಿ ರವಿ

ಬೆಂಗಳೂರು : ವಿವಾದಿತ 3 ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದ ನಿರ್ಧಾರವನ್ನು ಸಮರ್ಥಿಸಿಕೊಂಡು, ವಿರೋಧಿಸುವವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿತಿರುಗೇಟು ನೀಡಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಿಎಎ ರದ್ದುಪಡಿಸದಿದ್ದರೆ ಶಾಹೀನ್ ಬಾಗ್ ರೀತಿ ರಕ್ತಪಾತ ನಡೆಯುತ್ತೆ ಅಂತಾ ಓವೈಸಿ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ರಕ್ತಪಾತಕ್ಕೆ ಅವಕಾಶ ಇಲ್ಲ. ಓವೈಸಿ ಕಸಬ್ ರೀತಿ, ಬಿನ್ ಲಾಡೇನ್ ರೀತಿ ವರ್ತಿಸಲು ಬಂದರೆ ಭಾರತ ಈ ರೀತಿ ಹಿಂಸಾಚಾರವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಭಾರತ ಇಂತವರನ್ನ ತಡೆಗಟ್ಟಲು ಸಿದ್ದವಿದೆ ಎಂದರು.

CAA ಪೌರತ್ವ ಕೊಡುವ ಕಾಯ್ದೆ.ಧಾರ್ಮಿಕ ವಿರೋಧದಿಂದ ಇತರೆ ದೇಶಗಳಿಂದ ಬಂದಿರುವವರಿಗೆ ಪೌರತ್ವ ಕೊಡುವುದು. ಹಿಂದೂ, ಜೈನ, ಬೌದ್ಧರಿಗೆ ಪೌರತ್ವ ನೀಡುತ್ತಿದೆ. ಅದೇ ಮಾದರಿಯಲ್ಲೇ ಮುಸ್ಲಿಮರಿಗೂ ನೀಡಬೇಕು ಅನ್ನೋದು ಅವರ ಬೇಡಿಕೆ. ಬೇರೆ ಬೇರೆ ದೇಶಗಳಲ್ಲಿ ಘೋಷಿತ ಇಸ್ಲಾಂ ದೇಶಗಳಿವೆ. ಇಸ್ಲಾಂ ರಾಷ್ಟ್ರ ಅಂತ ಘೋಷಣೆ ಮಾಡಿರೋ ದೇಶಗಳು ಸರ್ವ ಧರ್ಮ ಅಳವಡಿಸಿಕೊಳ್ಳಬೇಕು. ಉಳಿದವರನ್ನ ಕಾಫೀರರು ಅಂತ ಘೋಷಿಸಿ, ಅವರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಭಾರತ ಅಖಂಡ ಭಾರತವಾದಾಗ ಮಾತ್ರ, ಎಲ್ಲರಿಗೂ ಪೌರತ್ವ ಸಿಗಲಿದೆ. ಅಕ್ರಮ ನುಸುಳುಕೋರರಿಗೆ ಇಲ್ಲಿ ಜಾಗ ಇಲ್ಲ ಎಂದರು.

ರೈತರ ಪ್ರತಿಭಟನೆ ಜೊತೆ ಅರ್ಬನ್ ನಕ್ಸಲ್ಸ್, ಸಿಎಎ ಹೋರಾಟಗಾರರು, ಬಿಜೆಪಿ ವಿರೋಧಿಸೋ ರಾಜಕೀಯ ಪಕ್ಷಗಳು ಸೇರಿಕೊಂಡವು. ಉತ್ತಿ-ಬಿತ್ತದವನೂ ಕೂಡ ರೈತನಾಗಿ ಪ್ರತಿಭಟನೆಗೆ ಕೂತಿದ್ದ. ಈ ಪ್ರತಿಭಟನೆ ಹಿಂದೆ ದೇಶವನ್ನ ತುಂಡರಿಸೋ ತಂತ್ರವಿದೆ ಅಂತ ಮಾಹಿತಿ ದೊರೆಯಿತು. ಹೀಗಾಗಿ ರೈತರಿಗೆ ಉಪಯೋಗವಾಗುವ ಮೂರು ಕಾಯ್ದೆ ಹಿಂಪಡೆಯಲಾಗಿದೆ. ಇಷ್ಟೆಲ್ಲಾ ಹೇಳಿದ ಬಳಿಕವೂ ಪ್ರತಿಭಟನೆ ಮುಂದುವರೆಸೋದಾಗಿ ಹೇಳ್ತಿದ್ದಾರೆ ಎಂದು ಸಿಟಿ ರವಿ ಅಸಮಾಧಾನ ವ್ಯಕ್ತಪಡಿಸಿದರು.

Edited By : Manjunath H D
Kshetra Samachara

Kshetra Samachara

23/11/2021 06:03 pm

Cinque Terre

954

Cinque Terre

0

ಸಂಬಂಧಿತ ಸುದ್ದಿ