ಬೆಂಗಳೂರು: ಮಳೆ ಬಂದು ಸಾಕಷ್ಟು ಹಾನಿ ಆಗಿದೆ. ಮನೆಗಳು ಬಿದ್ದಿವೆ. ಜಾನುವಾರಗಳು ಸಂಕಷ್ಟದಲ್ಲಿವೆ. ಆದರೆ ಜನ ಸ್ವರಾಜ್ ಅಂತಲೇ ಬಿಜೆಪಿ ಶಂಕ ಊದಿಕೊಂಡು ಓಡಾಡ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಹಿಂಗಾರು ಮಳೆ ಹೆಚ್ಚಾಗಿದೆ. ಇದರಿಂದ 12 ಹೆಕ್ಟರೆ ಪ್ರದೇಶ ಬೆಳೆನಾಶವಾಗಿದೆ. ಆದರೆ ಕಂದಾಯ ಇಲಾಖೆ ಕೇವಲ 5 ಹೆಕ್ಟರ್ ಪ್ರದೇಶ ಬೆಳೆ ಹಾನಿಯಾಗಿದೆ ಅಂತ ಹೇಳುತ್ತಲೇ ಇದೆ.ಕಾಫಿ,ಶೇಂಗಾ,ರಾಗಿ,ಭತ್ತದ ಬೆಳೆ ಹಾಳಾಗಿದೆ. ಆದರೆ ಸರ್ಕಾರಕ್ಕೆ ಇದು ಯಾವುದು ಬೇಕಿಲ್ಲ. ಕಾಟಾಚಾರಕ್ಕೆ ನೆರಪೀಡಿತ ಪ್ರದೇಶಕ್ಕೆ ಸಿಎಂ ಭೇಟಿಕೊಡ್ತಿದ್ದಾರೆ ಎಂದು ಚುಚ್ಚಿದ್ದಾರೆ ಸಿದ್ದರಾಮಯ್ಯ.
ಪರಿಹಾರ ಕೊಡೋದಕ್ಕೆ ನೀತಿ ಸಂಹಿತೆ ಅಡ್ಡ ಬರೋದಿಲ್ಲ.ಆದರೆ ಸರ್ಕಾರದ ಯಾರೊಬ್ಬ ಸಚಿವರು ಹಾನಿಯಾದ ಜಿಲ್ಲೆಗೆ ಹೋಗಿಯೇ ಇಲ್ಲ. ಪರಿಹಾರವನ್ನೂ ಕೊಟ್ಟಿಯೇ ಇಲ್ಲ ಎಂದು ಹೇಳಿದ್ದಾರೆ ಸಿದ್ದರಾಮಯ್ಯ.
Kshetra Samachara
22/11/2021 03:42 pm