ವರದಿ: ಗಣೇಶ್ ಹೆಗಡೆ
ಬೆಂಗಳೂರು: ಕನ್ನಡದ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನಾಳೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.
107 ವರ್ಷಗಳ ಇತಿಹಾಸ ಹೊಂದಿರುವ ಕಸಾಪದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ 21 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ರಾಜ್ಯದ 30 ಜಿಲ್ಲೆಗಳಲ್ಲಿ 3.10 ಲಕ್ಷ ಮತದಾರರು ಇದ್ದಾರೆ. ಬೆಂಗಳೂರು ನಗರದಲ್ಲಿ 36,491 ಕಸಾಪ ಸದಸ್ಯರಿದ್ದಾರೆ. ಉಡುಪಿಯಲ್ಲಿ ಅತಿ ಕಡಿಮೆ 1987 ಸದಸ್ಯರಿದ್ದಾರೆ.
ನಾಳೆ ನ.21ರಂದು ಬೆಳಗ್ಗೆ 8ರಿಂದ 4 ಗಂಟೆವರೆಗೆ ಚುನಾವಣೆ ನಡೆಯಲಿದೆ. ನಾಳೆಯೇ ಮತ ಎಣಿಕೆ ಕಾರ್ಯ ಕೂಡ ನಡೆಯಲಿದೆ. ಜಿಲ್ಲಾ ಘಟಕದ ಅಧ್ಯಕ್ಷರ ಫಲಿತಾಂಶ ಘೋಷಣೆ ಆಗಲಿದೆ.
ತದನಂತರ ನ.24 ರಂದು ಅಂತಿಮ ಚುನಾವಣಾ ಫಲಿತಾಂಶ ಹಾಗೂ ಕಸಾಪ ಅಧ್ಯಕ್ಷರ ಆಯ್ಕೆ ಬಗ್ಗೆ ಘೋಷಣೆ ಆಗಲಿದೆ.
ಈ ಸಂಬಂಧ ಪ್ರಚಾರವೂ ಬಿರುಸಿನಿಂದ ನಡೆದಿದೆ. ಮತದಾರರನ್ನು ಸೆಳೆಯಲು ನಾನಾ ರೀತಿಯ ಪ್ರಯತ್ನ ಕಣದಲ್ಲಿದ್ದವರಿಂದ ಸಾಗಿದೆ.
ಇನ್ನು, ಬೆಂಗಳೂರು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. 300ಕ್ಕೂ ಹೆಚ್ಚಿನ ಸಿಬ್ಬಂದಿ ಚುನಾವಣೆ ಕರ್ತವ್ಯದಲ್ಲಿ ತೊಡಗಿದ್ದಾರೆ.
Byte - ಎಸ್.ಟಿ.ಮೋಹನ್ ರಾಜು, ವಿಶೇಷ ಚುನಾವಣಾಧಿಕಾರಿ
Kshetra Samachara
20/11/2021 02:05 pm