ಬೆಂಗಳೂರು: ಕೇಂದ್ರ ಸರ್ಕಾರ ರೈತರ ಮೂರು ಕಾಯ್ದೆಗಳನ್ನ ಹಿಂಪಡೆದಿದೆ.ಇದನ್ನ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮದೇ ರೀತಿಯಲ್ಲಿ ಟೀಕಿಸಿದ್ದಾರೆ. ರೈತರ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದೆ. ಅದಕ್ಕೇನೆ ರೈತರ ಈ ಕಾಯ್ದೆಯನ್ನ ಹಿಂಪಡೆದಿದೆ ಅಂತಲೇ ಕಾಮೆಂಟ್ ಮಾಡಿದ್ದಾರೆ.
ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈತರ ಕಾಯ್ದೆ ಹಿಂದೆಕ್ಕೆ ಪಡೆದಿದೆ.ರೈತರ ಮೇಲೆ ಕೇಂದ್ರ ಸಚಿವರ ಮಗ ಕಾರ್ ಹತ್ತಿಸಿ ಹತ್ಯೆ ಮಾಡಿದ್ದಾರೆ. ಇದರಿಂದ ರೈತರ ಹೋರಾಟವೂ ಜೋರ್ ಆಗಿತ್ತು.ಅದಕ್ಕೇನೆ ಕೇಂದ್ರ ಸರ್ಕಾರ ರೈತರ ಮೇಲಿನ ಕಾಯ್ದೆ ವಾಪಾಸ್ ಪಡೆದಿದೆ ಅಂತಲೇ ದೂರಿದ್ದಾರೆ ಸಿದ್ದರಮಾಯ್ಯ.ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯಬೇಕು.ಸತ್ತವರಿಗೆ 25 ಲಕ್ಷ ಪರಿಹಾರ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ರೈತರ ಕಾಯ್ದೆ ಹಿಂಪಡೆದಿರೋದು ರೈತರಿಗೆ ಸಿಕ್ಕ ಎರಡನೇ ಸ್ವಾತಂತ್ರ್ಯ.ಕಾಂಗ್ರೆಸ್ ಪ್ರಕಾರ ಇದು ಅವರ ಸ್ವಾತಂತ್ರ್ಯದ ಹೋರಾಟ ಅಂದಿರೋ ಸಿದ್ದರಾಮಯ್ಯನವರು, ಕೇಂದ್ರ ಸರ್ಕಾರ ಚುನಾವಣೆ ಹಿನ್ನೆಲೆಯಲ್ಲಿಯೇ ಎಲ್ಲ ಬದಲಾವಣೆ ಮಾಡುತ್ತಿದೆ. ಆದರೆ ಇನ್ನೂ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡಬೇಕಿದೆ. ಅಗತ್ಯ ವಸ್ತುಗಳ ಬೆಲೆ ಕೂಡ ಇಳಿಕೆ ಆಗಬೇಕಿದೆ ಅಂದು ಒತ್ತಾಯಿಸಿದ್ದಾರೆ ಸಿದ್ದರಾಮಯ್ಯ.
Kshetra Samachara
19/11/2021 12:14 pm