ಬೆಂಗಳೂರು: ಕಾಂಗ್ರೆಸ್ ನವರು ಬರೀ ಬುರುಡೆ ಬಿಡ್ತಿದ್ದಾರೆ. ಜನರಿಗೂ ಗೊತ್ತಾಗಿದೆ. ಕಾಂಗ್ರೆಸ್ ಅಂದ್ರೆ ಬುಡುಬುಡಿಕೆ ಅಂತ ಟೀಕಿಸಿದ್ದಾರೆ ಸಚಿವ ಈಶ್ವರಪ್ಪ.
ಕಾಂಗ್ರೆಸ್ ನ ಸಿದ್ದರಾಮಯ್ಯನವ್ರು ಈ ಹಿಂದೆ ಹೇಳಿದ್ದರು. ಬಿಜೆಪಿ 28 ಸೀಟಿನಲ್ಲಿ ಒಂದೇ ಒಂದು ಗೆಲ್ಲೋದಿಲ್ಲ ಅಂತ. ಆದರೆ, ನಾವು 25 ಸೀಟ್ ಗೆದ್ದಿದ್ದೇವೆ. ಅವ್ರು ಕೇವಲ ಒಂದೇ ಒಂದು. ಹಿಂಗೆ ಕಾಂಗ್ರೆಸ್ ಬುರುಡೆ ಬಿಡ್ತಾನೆ ಇದೆ ಎಂದಿದ್ದಾರೆ ಈಶ್ವರಪ್ಪ.
ವಿಧಾನಸಭೆ ಚುನಾವಣೆಯಲ್ಲಿ ನಾವೇ ಸಿಎಂ ಅಂದ್ರು.ಸಿದ್ದರಾಮಯ್ಯನೇ ಚಾಮುಂಡೇಶ್ವರಿಯಲ್ಲಿ ಸೋತು ಹೋದ್ರು.ಮೂರು ಕಾರ್ಪೊರೇಶನ್ ಚುನಾವಣೆಯಲ್ಲೂ ಸೋತ್ರು.ಹಾನಗಲ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಅಷ್ಟೆ ಎಂದು ಈಶ್ವರಪ್ಪ ಚುಚ್ಚಿದ್ದಾರೆ.
Kshetra Samachara
15/11/2021 07:42 pm