ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಹೋದರ ಲಖನ್ ಜಾರಕಿಹೊಳಿ ಟಿಕೆಟ್ ಲಾಬಿ; ಸಿ.ಎಂ ಭೇಟಿ ಆದ ಜಾರಕಿಹೊಳಿ

ಬೆಂಗಳೂರು: ರಮೇಶ್ ಜಾರಕಿಹೊಳಿ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ರಾಜಕೀಯವಾಗಿ ಬದುಕು‌ ಮುಗಿದೇ ಹೋಯಿತು ಅನ್ನುವಷ್ಟರಲ್ಲಿ ಶತಾಯಗತಾಯ ಮತ್ತೆ ಅಧಿಕಾರ ಕೈ ಸೇರಬೇಕಾದ ಸರ್ವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಸಂಬಂಧ ಟೆಂಪಲ್ ರನ್, ದೆಹಲಿ ಭೇಟಿ, ರಾಜಕೀಯ ಧುರೀಣರೊಂದಿಗೆ ಚರ್ಚೆ ಹೀಗೆ ಮತ್ತೆ ರಾಜಕೀಯ ಬದುಕಿಗೊಂದು ಆಕಾರ ಕೊಡಲು ಪ್ರಯತ್ನಿಸುತ್ತಲೇ ಇದ್ದಾರೆ.

ಸದ್ಯ ಇವರು ಆರ್ ಟಿ ನಗರದ ನಿವಾಸದಲ್ಲಿರುವ ಸಿಎಂ ಭೇಟಿ ಮಾಡಿದ್ದು,ಅರ್ಧ ಗಂಟೆ ಕಾಲ ಚರ್ಚೆ ನಡೆಸಿದ್ದಾರೆ.ಪರಿಷತ್ ಚುನಾವಣೆ‌ ಸಂಬಂಧ ಸಹೋದರ ಲಖನ್ ಜಾರಕಿಹೊಳಿಗೆ ಬಿಜೆಪಿ ಟಿಕೆಟ್ ಗಿಟ್ಟಿಸಲು ರಮೇಶ್ ಜಾರಕಿಹೊಳಿ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Edited By : Nirmala Aralikatti
Kshetra Samachara

Kshetra Samachara

13/11/2021 12:16 pm

Cinque Terre

154

Cinque Terre

0

ಸಂಬಂಧಿತ ಸುದ್ದಿ