ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ವಿಟರ್ ವಾರ್ ನಲ್ಲಿ 'ಕಮಲ-ದಳ'ದ ಮಾನಹರಾಜು

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಟ್ವಿಟರ್ ವಾರ್ ತಾರಕಕ್ಕೇರುತ್ತಿದೆ.ಪಕ್ಷ ಪಕ್ಷಗಳ ನಡುವೆ ವೈಯಕ್ತಿಕ ವಿಚಾರ ಬಯಲಿಗೆ ಬರುತ್ತಿವೆ. ನಿನ್ನೆ ಕುಮಾರ್ ಸ್ವಾಮಿ, ಆರ್.ಎಸ್.ಎಸ್. ಶಾಖೆ ನೀಲಿ ಚಿತ್ರದ ಶಾಖೆ ಅಂತ ಟೀಕಿಸಿದ್ದರು. ಇವತ್ತು ಬಿಜೆಪಿ ಕುಮಾರ್ ಸ್ವಾಮಿ ಅವರ ವೈಯಕ್ತಿಕ ಬದುಕಿನ ತಪ್ಪುಗಳನ್ನ ಎತ್ತಿ ಹಿಡಿದು, ನಿಮಗೆ ಇಬ್ಬರು ಹೆಂಡಿರು ಅಂತ ಇತರ ವಿಷಯಗಳನ್ನೂ ಬಟಾಬಯಲು ಮಾಡಿದೆ.

ಉಪ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಈ ಟ್ವಿಟರ್ ವಾರ್ ಎಲ್ಲೆ ಮೀರುತ್ತಿದೆ. ಕುಮಾರ್ ಸ್ವಾಮಿ ಕೂಡ ಬಿಡ್ತಿಲ್ಲ. ಬಿಜೆಪಿ ಪಕ್ಷವೂ ಬಿಡುತ್ತಿಲ್ಲ. ಮುಖಾ-ಮುಖಿ ಆದರೆ ಕಿತ್ತಾಡಿಕೊಳ್ತಾರೋ ಇಲ್ಲವೋ.ಆದರೆ ಟ್ವಿಟರ್ ಅಲ್ಲಂತೂ ಎಲ್ಲವೂ ಬಹಿರಂಗವಾಗಿ ರಣರಂಗವಾಗಿದೆ.

ಇವತ್ತಿನ ಲೇಟೆಸ್ಟ್ ಟ್ವಿಟ್ ಏನಪ್ಪ ಅಂದ್ರೆ, ಅದು ಬಿಜೆಪಿಯದ್ದು, ಕುಮಾರ್ ಸ್ವಾಮಿ ಅವರ ಜೀವನದ ತಪ್ಪುಗಳನ್ನ ಪಟ್ಟಿ ಮಾಡಿ ಟ್ವಿಟರ್ ಪೇಜ್ ಅಲ್ಲಿ ಹೇಳಿದೆ. ಜೀವನದಲ್ಲಿ ಎರಡು ಮದುವೆ ಆಗಿರೋದು ಈ ಎಲ್ಲ ತಪ್ಪುಗಳಲ್ಲಿ ಪ್ರಮುಖ ಅನ್ನೋ ಅರ್ಥದಲ್ಲಿಯೇ ಹೇಳಲಾಗಿದೆ.ಅಂದ್ರೆ ನೀವು ಬೈಗಮಿ (ಇಬ್ಬರನ್ನ ಮದುವೆ ಆದ ವ್ಯಕ್ತಿ)ಸಿಗ್ನಲ್ ಜಂಪ್,ವಿಶ್ವಾಸ ದ್ರೋಹ,ಭ್ರಷ್ಟಾಚಾರ,ಈ ಎಲ್ಲ ತಪ್ಪುಗಳನ್ನ ಮಾಡಿದ್ದೀರಾ? ಬೇರೆಯವರ ತಪ್ಪುಗಳನ್ನ ಹೇಳುವ ಮುಂಚೆ,ಇವುಗಳ ಮೇಲೆ ಕಣ್ಣಾಡಿಸಿ ಅಂತಲೇ ಹೇಳಿದೆ ಬಿಜೆಪಿ.

ಕುಮಾರ್ ಸ್ವಾಮಿ ಅವ್ರು ಈ ಟ್ವೀಟ್ ಗೆ ಈಗಾಗಲೇ ಆನ್ಸರ್ ಕೊಟ್ಟಿದ್ದಾರೆ. ಸಿಂದಗಿಯ ರಾಂಪುರದಲ್ಲಿ ಸದ್ಯ ಪ್ರಚಾರದಲ್ಲಿರೋ ಕುಮಾರ್ ಸ್ವಾಮಿ, ಸುದ್ದಿಗಾರರೊಂದಿಗೆ ಈ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನನ್ನ ತಪ್ಪುಗಳನ್ನ ನಾನು ಅರ್ಥ ಮಾಡಿಕೊಂಡಿದ್ದೇನೆ. ಅದನ್ನ ವಿಧಾನ ಸಭೆಯಲ್ಲೂ ಹೇಳಿದ್ದೇನೆ. ಅಷ್ಟೇ ಯಾಕೆ ತಪ್ಪು ಅರ್ಥ ಮಾಡಿಕೊಂಡು ತಿದ್ದಿಕೊಂಡು ಬದುಕು ನಡೆಸಿದ್ದೇನೆ ಅಂತ ಹೇಳಿದ್ದಾರೆ ಎಚ್ಡಿಕೆ.

Edited By :
Kshetra Samachara

Kshetra Samachara

20/10/2021 02:59 pm

Cinque Terre

1.19 K

Cinque Terre

0

ಸಂಬಂಧಿತ ಸುದ್ದಿ