ಬೆಂಗಳೂರು: ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಸೋನಿಯಾ ಗಾಂಧಿ - ರಾಹುಲ್ ಗಾಂಧಿ ನಡುವೆ ಪೈಪೋಟಿ ಶುರುವಾಗಿದೆ. ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್, ಪೆಡ್ಲರ್ ಎಂಬುದಾಗಿ ವರದಿಯೇ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸದ್ಯ ಕಟೀಲ್ ಹೇಳಿಕೆಗೆ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿ ರಾಜ್ಯಾಧ್ಯಕ್ಷ ಒಬ್ಬ ಅವಿವೇಕಿ. ಬಿಜೆಪಿ ಪಕ್ಷ ಇಂತಹ ಅವಿವೇಕಿಯನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿರೋದು ದುರಾದೃಷ್ಠಕರ. ನಳೀನ್ ಕುಮಾರ್ ಹೇಳಿರುವ ಮಾತಿಗೆ ಕೇಳುವ ಅರ್ಹತೆಯೂ ಇಲ್ಲಾ ಎಂದು ಕಿಡಿಕಾರಿದ್ದಾರೆ.
ನಳೀನ್ ಕುಮಾರ್ ಕಟೀಲ್ ಮಾನಸಿಕ ಅಸ್ವಸ್ಥರಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದವರ ಮನಸ್ಸು ಎಷ್ಟು ಕೊಳಕಾಗಿದೆ ಅನ್ನೋದು ಗೊತ್ತಾಗುತ್ತಿದೆ. ನಳಿನ್ ಕುಮಾರ್ ಕಟೀಲ್,ಯತ್ನಾಳ್, ಸಿ.ಟಿ.ರವಿ, ಅನಂತ ಕುಮಾರ್ ಹೆಗ್ಡೆ ಅಂತವರೆ ಇವರಿಗೆ ಹಿರೋಗಳು ಅವರು ಆಡುವ ಮಾತು ಎಂತದ್ದು,ಬಳಸುವ ಭಾಷೆ ಎಂತದ್ದು...? ಇಂತವರನ್ನ ಬೆಂಬಲಸುವವರೆ ನರೇಂದ್ರ ಮೋದಿ.
ನಳೀನ್ ಕುಮಾರ್ ಕಟೀಲ್ ನನ್ನು ಕೂಡಲೆ ವಜಾ ಮಾಡಬೇಕು.ಬಾಯಿ ಮುಚ್ಚಿಕೊಂಡು ಇರಪ್ಪ ಅಂತ ಹೇಳಬೇಕು. ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ ಅವರಿಗೆ ತಲೆ ಕೆಟ್ಟಿದೆ ಕಟೀಲ್ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
Kshetra Samachara
19/10/2021 05:20 pm