ಬೆಂಗಳೂರು:ದಸರಾ ಹಬ್ಬದ ಬಳಿಕ ಗಡಿ ಭಾಗದಲ್ಲಿ ಹೇರಿದ್ದ ಕೊರೊನಾ ನಿಯಮಗಳನ್ನ ಸಡಿಲಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವಾರಜ್ ಬೊಮ್ಮಾಯಿ ಹೇಳಿದ್ದಾರೆ.
ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಕೇಸ್ ಮಿತಿ ಮೀರಿತ್ತು. ಆದ ಕಾರಣ ರಾಜ್ಯದ ಗಡಿ ಭಾಗದಲ್ಲಿ ಕೋವಿಡ್ ನಿಯಮಗಳನ್ನ ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿತ್ತು. ಈಗ ಕೋವಿಡ್ ಕೇಸ್ ಎರಡೂ ರಾಜ್ಯದಲ್ಲಿ ಕಡಿಮೆ ಆಗಿರೋ ಥರ ಕಾಣುತ್ತಿದೆ. ಎಲ್ಲವನ್ನೂ ಕೂಲಂಕಷವಾಗಿಯೇ ಪರಾಮರ್ಶಿಸಿದ ಬಳಿಕ ಗಡಿ ಭಾಗದ ಕೋವಿಡ್ ನಿಯಮಗಳನ್ನ ಸಡಿಲಗೊಳಿಸಲಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
Kshetra Samachara
14/10/2021 07:02 pm