ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ತೊಂದರೆ ಉಂಟುಮಾಡಿತು ಹೀಗಾಗಿ ಶಾಸಕ ಸತೀಶ್ ರೆಡ್ಡಿ ಅಧಿಕಾರದ ಜೊತೆಗೂಡಿ ಸ್ಥಳ ಪರಿಶೀಲನೆ ಮಾಡಿ ಸೂಚನೆ ನೀಡಲಾಯಿತು.
ಇನ್ನು ಬಿಳೇಕಹಳ್ಳಿ ವಾರ್ಡ್-188ರ ಅನುಗ್ರಹ ಬಡಾವಣೆಯಲ್ಲಿ ಮಳೆಯ ಸಂದರ್ಭದಲ್ಲಿ ನೀರು ತುಂಬಿ ಹಲವು ತೊಂದರೆಯನ್ನು ಈ ಭಾಗದ ನಿವಾಸಿಗಳು ಎದುರಿಸಿದ್ದು ಇದರ ಪರಿಹಾರಕ್ಕಾಗಿ ರಾಜಕಾಲುವೆಯನ್ನು ಶುದ್ದಿಗೊಳಿಸಿ ಪಂಪ್ ಮಾಡುವ ಕಾಮಗಾರಿಗೆ ಶಾಸಕ ಸತೀಶ್ ರೆಡ್ಡಿ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ಬಿಬಿಎಂಪಿ ಜಂಟಿ ಆಯುಕ್ತರಾದ ಕೃಷ್ಣಮೂರ್ತಿ BWSSB ,ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು
Kshetra Samachara
27/06/2022 06:16 pm