ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕ್ರೀಡಾ ಇಲಾಖೆಯ ಕಾರ್ಯವೈಖರಿ ತಿಳಿಯಲು ಒಂದು ದಿನ ಯುವ ಕ್ರೀಡಾಧಿಕಾರಿಯಾಗಬೇಕೇ?; ಅರ್ಜಿ ಹಾಕಿ

ಬೆಂಗಳೂರು: ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ಅಂಗವಾಗಿ 18 ವರ್ಷದಿಂದ 23 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ "ಒಂದು ದಿನ ಯುವ ಕ್ರೀಡಾ ಅಧಿಕಾರಿ" ಯಾಗಿ ಅನುಭವ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

'ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ'ಯ ಪ್ರಯುಕ್ತ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ನಮ್ಮ ದೇಶದ 18 ರಿಂದ 23ರ ವಯಸ್ಸಿನ ಯುವತಿಯರಿಗೆ ಯುಕೆಯ ಉನ್ನತ ರಾಜತಾಂತ್ರಿಕ ಅಧಿಕಾರಿಯ ಒಂದು ದಿನದ ಆಡಳಿತ ಅನುಭವ ಪಡೆಯಲು ಅವಕಾಶವನ್ನು ಕಲ್ಪಿಸಲು 'ಹೈಕಮಿಷನರ್ ಫಾರ್ ಎ ಡೇ' ಸ್ಪರ್ಧೆ ಏರ್ಪಡಿಸಿದ್ದು ಅದಕ್ಕಾಗಿ ಆಸಕ್ತ ಯುವತಿಯರಿಂದ ವಿವರಗಳನ್ನು ಆಹ್ವಾನಿಸಿದೆ. ಅದೇ ರೀತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ/ಉಪ ನಿರ್ದೇಶಕರ ಕಾರ್ಯ ವೈಖರಿಯನ್ನು ಪರಿಚಯಿಸಲು 18 ರಿಂದ 23 ವರ್ಷ ವಯಸ್ಸಿನ ಯುವತಿಯರು ಎಲ್ಲಾ ಜಿಲ್ಲೆಗಳ ಸಹಾಯಕ ಉಪ ನಿರ್ದೇಶಕರ ಜೊತೆಯಲ್ಲಿ ಒಂದು ದಿನ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್ 11, ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯಂದು ಒಂದು ದಿನ ಯುವ ಕ್ರೀಡಾ ಅಧಿಕಾರಿಯಾಗಿ ಅನುಭವ ಪಡೆಯಲು ಆಸಕ್ತ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ

ಆಸಕ್ತ ಯುವತಿಯರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಸೆಪ್ಟೆಂಬರ್ 25 ರವರೆಗೂ ಕಾಲಾವಕಾಶ ನೀಡಲಾಗಿದೆ. ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಿಂದ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

03/09/2022 10:53 pm

Cinque Terre

24.48 K

Cinque Terre

1

ಸಂಬಂಧಿತ ಸುದ್ದಿ