ದೇವನಹಳ್ಳಿ: ವೀರಶೈವ ಜನಾಂಗವನ್ನು ಕೇಂದ್ರ ಸರ್ಕಾರ OBC ಪಟ್ಟಿಯಲ್ಲಿ 3Bಗೆ ಸೇರಿಸಬೇಕು ಎಂದು ಒತ್ತಾಯಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಪಂಗಡಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ OBC ಪಟ್ಟಿಲಿ 3Bಗೆ ಸೇರಿಸುವಂತೆ ಒತ್ತಾಯಿಸಲು ಪ್ರತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಮುದಾಯ ಕರೆ ಕೊಟ್ಟಿದೆ. ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಭವನದ ಮುಂಭಾಗ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಜಮಾಯಿಸಿ ಜಿಲ್ಲಾಧಿಕಾರಿ ಲತಾ ರವರಿಗೆ ಮನವಿ ಪತ್ರ ನೀಡಿದರು.
OBC ಪಟ್ಟಿಲಿ ಸೇರಿಸಲು ಮನವಿ ನೀಡಿ CMಗೆ ತಲುಪಿಸಿ, ಹಾಗೂ ರಾಜ್ಯ ಸರ್ಕಾರ ನಿರ್ಣಯ ಮಾಡಿ ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕೆಂದು ವೀರಶೈವ ಲಿಂಗಾಯತ ಸಮುದಾಯ ಒತ್ತಾಯಿಸಿದೆ.
-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..
Kshetra Samachara
02/08/2022 01:05 pm