ವರದಿ: ಬಲರಾಮ್ ವಿ
ಬೆಂಗಳೂರು ಗ್ರಾಮಾಂತರ: ಹೊಸಕೋಟೆಯ ಸೂಲಿಬೆಲೆ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ಶ್ರೀರಾಮರ ದೇವಾಲಯವನ್ನು ಪೌರಾಡಳಿತ ಹಾಗೂ ಸಣ್ಣ ಕೈಗಾರಿಕಾ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಹೊಸಕೋಟೆ ತಾಲೂಕಿನಲ್ಲಿ ಕೆಲವು ರಾಜಕಾರಣಿಗಳು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ.
ತಾಲೂಕಿನಾದ್ಯಾಂತ 50ಕ್ಕೂ ಅಧಿಕ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದೇನೆ, ಆದರೆ ಶಾಸಕ ಹಾಗೂ ಸಂಸದರು ಒಂದು ದೇವಸ್ಥಾನ ಸಹ ನಿರ್ಮಾಣ ಮಾಡಿಲ್ಲ. ತಾವು ಯಾರಿಂದ ಸಹ ಲಂಚ ಪಡೆದಿಲ್ಲ, ದೇವಾಲಯ ನಿರ್ಮಾಣ ಮಾಡಲು ಸಹಾಯ ಮಾಡುವವರು ಇದ್ದರೆ ನೀಡಿ ಎಂದು ಹೇಳಿದ್ದೇನೆ ಎಂದರು.
ರಾಮರ ದೇವರ ಮೇಲೆ ಪ್ರಮಾಣ ಮಾಡುತ್ತೇನೆ ಲಂಚ ಪಡೆಯುವ ಬುದ್ದಿ ನನ್ನ ರಾಜಕೀಯ ಜೀವನದಲ್ಲಿ ಇಲ್ಲಾ. ನಮಗೆ ದೇವರು ಬೇಕಾದಷ್ಟು ನೀಡಿದ್ದಾನೆ, ನಾವು ಪಾರ್ಟಿ ಬಿಟ್ಟು ಬಂದು ಶರತ್ ಬಚ್ಛೇಗೌಡಗೆ ಭಿಕ್ಷೆ ನೀಡಿರುವುದಾಗಿ ತಿಳಿಸಿದರು.
ಈ ಭಾರಿಯ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
Kshetra Samachara
06/05/2022 05:15 pm