ಬೆಂಗಳೂರು :ರಾಜಧಾನಿ ಬೆಂಗಳೂರಲ್ಲಿ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳು ನಡುವೆ ಜಟಾಪಟಿ ಪರಿಣಾಮ ಉದ್ರಿಕ್ತ ವಾತಾವರಣ ನಿರ್ಮಾಣ ಆಗಿದೆ. ಬೆಂಗಳೂರಿನ ಚಂದ್ರಾ ಲೇಔಟ್ ನ ವಿದ್ಯಾಸಾಗರ ಶಾಲೆಯಲ್ಲಿ ಘಟನೆ ನಡೆದಿದೆ..
7ನೇ ತರಗತಿ ಮಕ್ಕಳಿಗೆ ಶಿಕ್ಷಕಿಯಿಂದ ಬೋರ್ಡ್ ಮೇಲೆ KLS ಅಂತಾ ಬರೆದಿದ್ದ ವಿಚಾರ ಗಲಾಟೆಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಸದ್ಯ ಚಂದ್ರಾ ಲೇಔಟ್ ನ ವಿದ್ಯಾಸಾಗರ್ ಶಾಲೆಗೆ ಪೊಲೀಸರು ದೌಡಾಯಿಸಿ ಮಕ್ಕಳು ಮತ್ತು ಶಿಕ್ಷಕರ ಜತೆ ಚರ್ಚೆ ನಡೆಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸಪಡುತ್ತಿದ್ದಾರೆ.
ವಿದ್ಯಾಸಾಗರ ಪಬ್ಲಿಕ್ ಶಾಲೆಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಡಿಪಿಐ ರಾಜೇಂದ್ರ ಅವರು ಚಂದ್ರಾ ಲೇಔಟ್ ನಲ್ಲಿರುವ ವಿದ್ಯಾಸಾಗರ್ ಶಾಲೆಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ಮಧ್ಯೆ, ಬೋರ್ಡ್ ಮೇಲೆ ಅಶ್ಲೀಲವಾಗಿ ಬರೆದ ಶಿಕ್ಷಕಿಯನ್ನ ಕರೆಸುವಂತೆ ಪೋಷಕರು ಪಟ್ಟುಹಿಡಿದಿದ್ದಾರೆ. ಚಂದ್ರಲೇಔಟ್ ಪೊಲೀಸರು ಪೋಷಕರನ್ನ ಸಮಾಧಾನ ಪಡಿಸುವ ಪ್ರಮೇಯ ಮುಂದುವರೆದಿದೆ.
PublicNext
12/02/2022 02:00 pm