ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿವಿಧ ಕಾಮಗಾರಿಗಳ‌ ಪ್ರಗತಿ ಪರಿಶೀಲನೆ ಮಾಡಿದ ವಸತಿ ಸಚಿವ ವಿ.ಸೋಮಣ್ಣ!

ರಿಪೋರ್ಟ್- ರಂಜಿತಾಸುನಿಲ್

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂತರಪಾಳ್ಯದಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕನಕಭವನ, ಚಂದ್ರಲೇಔಟ್ ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ಪೆಕ್ಟ್ರಮ್ ಬೀದಿ ದೀಪಗಳ ಕಂಟ್ರೋಲ್ ರೂಮ್, ಎಂ.ಸಿ.ಬಡಾವಣೆ ಆಸ್ಪತ್ರೆ ಹಾಗೂ ಅಗ್ರಹಾರ ದಾಸರಹಳ್ಳಿ ಆಸ್ಪತ್ರೆ ಕಾಮಗಾರಿಗಳನ್ನ ಶಾಸಕ,ವಸತಿ ಸಚಿವರಾದ ವಿ.ಸೋಮಣ್ಣರವರು ಪ್ರಗತಿ ಪರಿಶೀಲನೆ ಮಾಡಿದರು.

ಸಚಿವ ವಿ.ಸೋಮಣ್ಣ ಮಾತನಾಡಿ ಜನ ಸೇವೆಯೆ ಜನಾರ್ಧನ ಸೇವೆ ,ಸೋಮಣ್ಣ ಎಂದರೆ ಕೆಲಸ,ಕೆಲಸವೆಂದರೆ ಸೋಮಣ್ಣ .ನಗರ ಬೆಳದಂತೆ ಸಮಸ್ಯೆಗಳು ನಿರಂತರ ಅದರೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು ಎಂದು ಗೋವಿಂದರಾಜನಗರ ವಿಧಾನಸಭಾ ಹಲವಾರು ಯೋಜನೆಗಳು ರೂಪಿಸಲಾಗಿದೆ.ಶಿಕ್ಷಣ,ಆರೋಗ್ಯ ಮತ್ತು ಪರಿಸರದ ವಿಶೇಷವಾಗಿ ಗಮನಹರಿಸಲಾಗಿದೆ .ಪಂತರಪಾಳ್ಳದಲ್ಲಿ 200ಹಾಸಿಗೆ ಮತ್ತು ಅಗ್ರಹಾರ ದಾಸರಹಳ್ಳಿಯಲ್ಲಿ 300ಹಾಸಿಗೆ ಸಾಮ್ಯರ್ಥವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೂರು ತಿಂಗಳಲ್ಲಿ ಲೋಕರ್ಪಣೆಯಾಗಲಿದೆ.ಆರ್ಥಿಕವಾಗಿ ಹಿಂದುಳಿದ ಮಕ್ಕಳು ಐ.ಎಎಸ್. ಮತ್ತು ಐ.ಪಿ.ಎಸ್.ಅಧಿಕಾರಿಯಾಗಬೇಕು ಮಕ್ಕಳ ಕನಸು, ಅವರ ಶಿಕ್ಷಣ ಆಸೆ ಈಡೇರಿಸಲು ದಾಸಶೇಷ್ಠ ಕನಕದಾಸರ ಸ್ಮರಣೆಯಲ್ಲಿ ಕನಕ ಭವನ ನಿರ್ಮಿಸಲಾಗಿದೆ .ಇದೇ ತಿಂಗಳು 15ರಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿರವರು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ಸ್ಪೆಕ್ಟೃಮ್ ತಂತ್ರಜ್ಞಾನ ಬಳಸಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬೀದಿ ದೀಪಾಗಳ ಸಮಗ್ರ ಮಾಹಿತಿ ಮಾಹಿತಿ,ಬೀದಿ ದೀಪಗಳ ನಿರ್ವಹಣೆ,ದುರಸ್ತಿಗೆ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪ್ರತಿಯೊಬ್ಬ ನಾಗರಿಕರಿಗೆ ಸಮರ್ಪಕ ಮೂಲಭೂತ ಸೌಲಭ್ಯಗಳು ಲಭಿಸಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

09/07/2022 08:39 pm

Cinque Terre

1.53 K

Cinque Terre

0

ಸಂಬಂಧಿತ ಸುದ್ದಿ