ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಕೀಲರ ಸಂಘದ ವತಿಯಿಂದ ಚುನಾವಣಾ ಪ್ರಚಾರ; ರಂಗೇರಿದ ಚುನಾವಣೆಉ ಕಣ

ಆನೇಕಲ್: ವಕೀಲರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಇನ್ನು ಎರಡು ದಿನ ಬಾಕಿ ಇರುವಾಗಲೇ ಚುನಾವಣೆಯ ಹಬ್ಬರ ಜೋರಾಗಿದೆ. ವಕೀಲರ ಸಂಘದ ಅಧ್ಯಕ್ಷರ ಸ್ಥಾನಕ್ಕೆ ಬಾರಿ ಪೈಪೋಟಿ ನಡೆಯುತ್ತಿದೆ.

ಆದರೆ ಮತದಾನದ ಪ್ರಭುಗಳು ಯಾರನ್ನ ಕೈಹಿಡಿಯಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ..ಇನ್ನು ಯಾವುದೇ ಚುನಾವಣೆಗೂ ಕಡಿಮೆಯಿಲ್ಲದಂತೆ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಭಾನುವಾರ ನಡೆಯುವ ಆನೇಕಲ್ ವಕೀಲರ ಸಂಘದ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಸಿ ಕಣದಲ್ಲಿರುವ ಅಭ್ಯರ್ಥಿಗಳು ಪ್ರಣಾಳಿಕೆಯನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಅಧ್ಯಕ್ಷರ ಸ್ಥಾನಕ್ಕೆ ಮೂರು ಜನ ಸ್ಪರ್ಧೆ ಮಾಡಿದ್ದು, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಾಲ್ಕು ಜನ ಸದಸ್ಯರು ನಾಮಪತ್ರ ಸಲ್ಲಿಸಿರುತ್ತಾರೆ. ಖಜಾಂಜಿ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿರುತ್ತಾರೆ. ಹಾಗೆಯೇ ಕಾರ್ಯಕಾರಿ ಸಮಿತಿ ಸ್ಥಾನಕ್ಕೆ 22 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುತ್ತಾರೆ.

ನ್ಯಾಯಾಲಯದ ಆವರಣದಲ್ಲಿ ಅಬ್ಬರದ ವಾತಾವರಣ ಸೃಷ್ಟಿಯಾಗಿದೆ. ಹಿರಿಯರು ಕಿರಿಯರು ಎಂಬ ಭೇಧ ಭಾವವಿಲ್ಲದೆ ಎಲ್ಲರಿಗೂ ಕೈಕುಲುಕಿ ಪರಸ್ಪರ ಓಟನ್ನು ಕೇಳುವ ದೃಶ್ಯಗಳು ಸಾಮಾನ್ಯವಾಗಿತ್ತು. ಈಗಾಗಲೇ ಮನೆ ಮನೆಗೆ ತೆರಳಿ ಪ್ರಚಾರವನ್ನು ಮಾಡಿರುವ ಅಭ್ಯರ್ಥಿಗಳು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಎ. ಎಮ್. ಶ್ರೀನಿವಾಸ ರೆಡ್ಡಿಯವರು ನೇತೃತ್ವದಲ್ಲಿ ಒಂದು ಸಿಂಡಿಕೇಟನ್ನು ಮಾಡಿಕೊಂಡಿದ್ದಾರೆ.

ಆರ್ ರಮೇಶ್ ರವರು ಒಂದು ಸಿಂಡಿಕೇಟನ್ನು ಮಾಡಿಕೊಂಡಿದ್ದಾರೆ. ಈ ಎರಡು ಸಿಂಡಿಕೇಟನ್ನು ಹೊರತುಪಡಿಸಿ ಪ್ರತಿ ಮನೆಗೂ ಭೇಟಿ ನೀಡಿ ಹೊಸಬರಿಗೆ ಅವಕಾಶ ನೀಡಿ ಬದಲಾವಣೆಗೆ ಅವಕಾಶ ನೀಡಿ ಮತ್ತು ಸಂಘದ ಅಭಿವೃದ್ಧಿಗೆ ಕೆಲಸ‌ಮಾಡಲು ಅವಕಾಶ ಕೊಡಿ ಎಂದು ಬಾಲರೆಡ್ಡಿಯವರು ಮತದಾರರಿಗೆ ಮನವೊಲಿಸುತ್ತಿದ್ದಾರೆ.

ಎ‌ ಎಂ ಶ್ರೀನಿವಾಸ್ ರೆಡ್ಡಿಯವರು "ಸಂಘವನ್ನು ಕಟ್ಟಿ ಬೆಳೆಸಿದ್ದೇವೆ, ಉಳಿಸುವ ಮತ್ತು ಜವಾಬ್ದಾರಿಯುತವಾಗಿ ಸಂಘವನ್ನು ನಡೆಸುವ ಕೆಲಸವನ್ನು ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡುತ್ತಿದ್ದಾರೆ. "ಸಾಮಾಜಿಕ ಸಮಾನತೆಯನ್ನು ಕಾಪಾಡಿಕೊಂಡಿದ್ದೇವೆ, ನಮಗೆ ಅವಕಾಶ ಮಾಡಿಕೊಡಿ ವಕೀಲರ ಸಂಘವನ್ನು ಕಟ್ಟಿ ಬೆಳೆಸುತ್ತೇವೆಂದು ರಮೇಶ್ ರವರ ಸಿಂಡಿಕೇಟ್ ವಕೀಲರು ಮತದಾರರನ್ನು ಕೆಳಿಕೊಳ್ಳುತ್ತಿದ್ದಾರೆ. ಚುನಾವಣೆ ಪ್ರಚಾರ ರಂಗೇರಿದ್ದು ಭಾಗವಹಿಸುವ ಅಭ್ಯರ್ಥಿಗಳ ಪ್ರಚಾರ ಭರದಿಂದ ಸಾಗಿದ್ದು, ಆನೇಕಲ್ ವಕೀಲರ ಸಂಘದ ಅಧ್ಯಕ್ಷರ ಸ್ಥಾನದ ಮೂರು ಅಭ್ಯರ್ಥಿಗಳು ಸಮಾನ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಭಾನುವಾರ ಚುನಾವಣೆ ನಡೆಯುತ್ತಿದ್ದು ಯಾರಿಗೆ ಅಧ್ಯಕ್ಷ ಪಟ್ಟ ಗಿರಿ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ

Edited By : PublicNext Desk
Kshetra Samachara

Kshetra Samachara

22/07/2022 04:30 pm

Cinque Terre

2.25 K

Cinque Terre

0

ಸಂಬಂಧಿತ ಸುದ್ದಿ