ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಬಚ್ಚೇಗೌಡರದ್ದು ಜಮೀನ್ದಾರ್ ಕುಟುಂಬ; ನನ್ನ ಗಾಳಕ್ಕೆ ಬಚ್ಚೇಗೌಡರು ಬೀಳಲಿಲ್ಲ; ಡಿಕೆಶಿ

ನಗರದಲ್ಲಿ ನಡೆದ ಬೃಹತ್ ಹಾಲಿನ ಡೈರಿ ಮೇಳದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಂಸದ ಬಚ್ಚೇಗೌಡ ವೇದಿಕೆ ಹಂಚಿಕೊಂಡಿದ್ದರು. ಈ ಸಮಯದಲ್ಲಿ ಬಚ್ಚೇಗೌಡರನ್ನ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಬಚ್ಚೇಗೌಡರನ್ನ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ತಂತ್ರವನ್ನ ಹೇಳಿದ್ರು. ನಾವು ಹಾಕಿದ ಗಾಳಕ್ಕೆ ಮರಿಮೀನು ( ಶರತ್ ಬಚ್ಚೇಗೌಡ) ಬಿದ್ದಿದಕ್ಕೆ ಸಂತೋಷವಾಗಿದೆ ಎಂದರು.

ದೊಡ್ಡಬಳ್ಳಾಪುರ ನಗರದ ಹಾಲಿನ ಡೈರಿ ಮುಂಭಾಗದಲ್ಲಿ ನಡೆದ ಬೃಹತ್ ಹಾಲಿನ ಡೈರಿ ಮೇಳದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಂಸದ ಬಚ್ಚೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್ 20 ವರ್ಷಗಳ ನಂತರ ಬಚ್ಚೇಗೌಡರ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದೇನೆ.

ಬಚ್ಚೇಗೌಡರದ್ದು ದೊಡ್ಡ ಜಮೀನ್ದಾರ್ ಕುಟುಂಬ ನೂರಾರು ಎಕರೆ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದರು, ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ತರಲು ಎಸ್.ಎಂ ಕೃಷ್ಣ ಮತ್ತು ನಾನು ಕಳೆದ 20 ವರ್ಷಗಳಿಂದ ಪ್ರಯತ್ನ ಪಟ್ಟಿದ್ದೇವೆ, ಆದರೆ ನನ್ನ ಗಾಳಕ್ಕೆ ಬಚ್ಚೇಗೌಡರು ಬೀಳಲಿಲ್ಲ ಅವರ ಮಗ ಶರತ್ ಬಚ್ಚೇಗೌಡ ಬಿದ್ದರು. ನಮ್ಮ ಗಾಳಕ್ಕೆ ಮರಿಮೀನಾದ್ರು ಬಿತ್ತಾಲ್ಲ ಎಂಬ ಸಂತೋಷ ಇದೆ. ಬಚ್ಚೇಗೌಡರು ನಮ್ಮ ಜಿಲ್ಲೆಯವರು, ಶರತ್ ಬಚ್ಚೇಗೌಡ ನಮ್ಮ ಜಿಲ್ಲೆಯ ಆಸ್ತಿ ಎಂದು ಹೊಗಳಿದರು.

Edited By :
PublicNext

PublicNext

24/06/2022 05:20 pm

Cinque Terre

33.01 K

Cinque Terre

0

ಸಂಬಂಧಿತ ಸುದ್ದಿ