ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದರಗಳು ಏರಿಕೆಯಾಗಿದ್ದರೂ ಸಹ ಸರ್ಕಾರಿ ಕಂಪನಿಗಳು ಸುಮಾರು ಎರಡು ತಿಂಗಳಿನಿಂದ ದೇಶೀಯ ಬೆಲೆಗಳನ್ನು ಹೆಚ್ಚಿಸಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಬರೆ ಬೀಳೋದಂತೂ ಸತ್ಯ. ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್‌ನ ದೈನಂದಿನ ಬೆಲೆ ವಿವರ ಇಲ್ಲಿದೆ.
ಜನರ ದಿನನಿತ್ಯದ ಬಳಕೆಯ ವಸ್ತುಗಳಲ್ಲೊಂದಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸದ್ಯ ಬಲು ದುಬಾರಿ. ದಿನ ಬೆಳಗಾದರೆ ವಾಹನ ಸವಾರರು ಪೆಟ್ರೋಲ್ ಡೀಸೆಲ್ ಬೆಲೆಯ ಇಳಿಕೆಗಾಗಿ ಕಾಯುತ್ತಿರುತ್ತಾರೆ. ಪ್ರತಿ ನಿತ್ಯ ಪೈಸೆ ಲೆಕ್ಕದಲ್ಲಿ ತೈಲ ಬೆಲೆ ಹಾವು ಏಣಿಯಾಟ ಆಡುತ್ತಿರುತ್ತದೆ. ಹೀಗಾಗಿದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್‌ನ ದೈನಂದಿನ ಬೆಲೆ ವಿವರ ಗ್ರಾಹಕರಿಗಾಗಿ ಇಲ್ಲಿ ಕೊಡಲಾಗಿದೆ.
ಅಕ್ಟೋಬರ್ 7 ಶುಕ್ರವಾರ ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಬೆಲೆ ₹101.94 ಮತ್ತು ಡೀಸೆಲ್ ₹87.89 ರೂಪಾಯಿ ಇದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹96.72 ರೂಪಾಯಿ ಇದ್ದರೆ, ಲೀಟರ್ ಡೀಸೆಲ್ ಬೆಲೆ ₹89.62 ರೂಪಾಯಿ ಇದೆ. ಹಾಗಾಗಿ ನಿನ್ನೆಯ ದರವೇ ಇಂದು ಕೂಡ ಬಹುತೇಕ ನಗರಗಳಲ್ಲಿ ಮುಂದುವರಿದಿದೆ.
Kshetra Samachara
08/10/2022 07:27 pm