ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆದರೆ, ಎರಡು ವರ್ಷ ಚುನಾವಣೆ ನಡೆಯದಿರಲು ಕೋವಿಡ್ ಕಾರಣ ಎಂದು ಬಿಬಿಎಂಪಿ ಮಾಜಿ ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.
ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸನ್ನದ್ಧವಾಗಿದೆ. ಸದಾ ಜನರ ಬಳಿ ಇರುವ ಪಕ್ಷ ನಮ್ಮದು. ಪಕ್ಷದ ಸಂಘಟನೆ ಕಾರ್ಯ ಸದಾ ನಡೆಯು ತ್ತಿದ್ದು, ಚುನಾವಣೆಗೆ ಎಲ್ಲಾ ತಯಾರಿ ನಡೆಯುತ್ತಿದೆ ಎಂದು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
ಇದೇ ವೇಳೆ ಮಾಜಿ ಸಿಎಂ ಬಿಎಸ್ ವೈ ಅವರ ಕಾರ್ಯವೈಖರಿಯನ್ನು ಹಾಡಿ ಹೊಗಳಿದ ಗೌತಮ್ ಕುಮಾರ್, ಕೋವಿಡ್ ಎರಡು ಅಲೆಯಿಂದಾಗಿ ಚುನಾವಣೆ ನಡೆಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಗೌತಮ್ ಕುಮಾರ್ ಜತೆ ನಮ್ಮ ಪ್ರತಿನಿಧಿ ಗಣೇಶ್ ಹೆಗಡೆ ನಡೆಸಿರುವ ಮಾತುಕತೆ ಇಲ್ಲಿದೆ...
ವರದಿ: ಗಣೇಶ್ ಹೆಗಡೆ
PublicNext
15/07/2022 08:37 pm