ಮೆಜೆಸ್ಟಿಕ್ 'ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ' ರೈಲು ನಿಲ್ದಾಣದಲ್ಲಿ ಮಸೀದಿ ನಿರ್ಮಾಣವನ್ನು ಎಸ್ ಡಿಪಿಐ ಸಮರ್ಥಿಸಿಕೊಂಡಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ದಶಕಗಳಿಂದ ಇಲ್ಲಿ ಕೂಲಿ ಕಾರ್ಮಿಕರು ನಮಾಜ್ ಮಾಡುತ್ತಿದ್ದಾರೆ. ಅದು ಅನ್ಯ ಧರ್ಮೀಯರಿಗೆ ವಿಶ್ರಾಂತಿ ತಾಣ ಕೂಡ ಆಗಿತ್ತು.
ಆದರೆ ಒಬ್ಬ ರೌಡಿ, ಲೈಂಗಿಕ ಕಿರುಕುಳ ಹೊತ್ತ ಆರೋಪಿಯಿಂದ ನಮಾಜ್ ಗೆ ತೊಂದರೆ ಮಾಡಿದ್ದಾರೆ. ಯಾವುದೇ ಹಿಂದೂ ಸಂಘಟನೆಯಿಂದ ವಿರೋಧ ಇರಲಿಲ್ಲ ಎಂದರು.
ಇನ್ನು, ಡಿ.ಜೆ.ಹಳ್ಳಿ ಗಲಾಟೆಯಲ್ಲಿ ಎಸ್ ಡಿಪಿಐ ಪಾತ್ರ ಇಲ್ಲ. ನಾವೂ ಗಲಾಟೆ ತಪ್ಪಿಸಲು ಹೋಗಿದ್ದು, ಆದರೆ ಅಲ್ಲಿ ಆಗಿದ್ದು ಬೇರೆ. ನಮ್ಮ ಸದಸ್ಯರ ಮೇಲೆ ಸುಳ್ಳು ಕೇಸ್ ಹಾಕಲಾಗಿದೆ. ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದರು.
Kshetra Samachara
17/06/2022 05:22 pm