ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮತ್ತೆ ಮುನ್ನೇಲೆಗೆ ಬಂದ ವೀರಶೈವ : ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಈ ಬಗ್ಗೆ ಸೋಮವಾರ ಲಿಂಗಾಯತ ಧರ್ಮ ಮಹಾಸಭಾದ ಗಂಗಾ ಮಾತಾಜೀ, ಲಿಂಗಾಯಿತ ಮಠಾಧೀ ಶರ ಒಕ್ಕೂಟ ಬಸವಲಿಂಗ ಪಟ್ಟದೇ ವರು, ಬಸವಧರ್ಮ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣರವರು, ರಾಷ್ಟೀಯ ಬಸವದಳ ಅಧ್ಯಕ್ಷ ಬಸವರಾಜ್ ದನ್ನೂರು ,ಗದಗ್ ಸಿದ್ದರಾಮಣ ಶರಣರು,ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಮಠಾಧೀಶರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಎಲ್ಲರಿಗೂ ತಿಳಿದಂತೆ ಕೋವಿಡ್-19 ಹಾವಳಿ ಕಡಿಮೆಯಾಗಿದೆ. ಎರಡು ವರ್ಷ ವಿಳಂಬವಾಗಿರುವ ಈ ದಶಕದ ದೇಶದ ಜನಗಣತಿ ಇನ್ನೇನು ಪ್ರಾರಂಭವಾಗಲಿದೆ. ಲಿಂಗಾಯತ ಎಂಬುದು ಒಂದು ವಿಶೇಷ ತತ್ವ ಸಿದ್ಧಾಂತ, ತನ್ನದೇ ಆದ ಒಂಬೈನೂರು ವರ್ಷಗಳ ಇತಿಹಾಸ ಹೊಂದಿರುವ ಧರ್ಮ. ಕಾಲಾಂತರದಲ್ಲಿ ಅನೇಕ ಪಂಗಡಗಳು (ಸುಮಾರು ಒಂದು ನೂರು) ಲಿಂಗಾಯತದಲ್ಲಿ ಹುಟ್ಟಿಕೊಂಡವು. ಅವರೆಲ್ಲರೂ ಮೂಲ ಲಿಂಗಾಯತ ತತ್ವಗಳನ್ನು ಪರಿಪಾಲಿಸುತ್ತಾರೆ. ಆದ್ದರಿಂದ ಅವರೆಲ್ಲರೂ ಲಿಂಗಾಯತರೆ. ವಿಪರ್ಯಾಸವೆಂದರೆ, ವೀರಶೈವ ಮಹಾಸಭೆಯು ಆದಾಧಿಸುವ ವೀರಶೈವರ ಗುರುಗಳು (ಪಂಚಾಚಾರ್ಯರು) ವೀರಶೈವ ಮಹಾಸಭಾದ ನಿರ್ಣಯವನ್ನು ತಿರಸ್ಕರಿಸಿದ್ದಾರೆ. ಅವರಿನ್ನೂ ವೀರಶೈವರು ಹಿಂದೂಗಳಿಂದೇ ಹೇಳುತ್ತಿದ್ದಾರೆ.

ಈ ಮಧ್ಯ, ಭಾರತ ಸರ್ಕಾರವು ವೀರಶೈವರು ಹಿಂದೂಗಳೆಂದು ಪರಿಗಣಿಸಿ ವೀರಶೈವ ಮಹಾಸಭಾದ ವಿನಂತಿಯನ್ನು ತಿರಸ್ಕರಿಸಿದೆ. ಅದು ಸರಿಯಾದ ನಿರ್ಣಯವಾಗಿದೆ. ಲಿಂಗಾಯತರು ವೀರಶೈವರಲ್ಲ, ವೀರಶೈವರು ಕಲಮಟ್ಟಿಗೆ ಲಿಂಗಾಯತದ ಕೆಲವು ತತ್ವಗಳನ್ನು ಆಚರಿಸುವುದರಿಂದ ಅವರನ್ನು ಒಂದು ಪ್ರತ್ಯೇಕ ಸಣ್ಣ ಪಂಗಡ ಮಾತ್ರ ಎಂದು ತಿಳಿಯಬಹುದಾಗಿದೆ.

ಇಷ್ಟೆಲ್ಲಾ ರಾದ್ಧಾಂತಗಳನ್ನು ಸೃಷ್ಟಿಸಿದ ವೀರಶೈವ ಮಹಾಸಭೆಯು 2018 ರಲ್ಲಿ ಉಲ್ಟಾ ಹೊಡೆಯಿತು. 2018ರಲ್ಲಿ ಕರ್ನಾಟಕ ಸರ್ಕಾರವು ಕಾನೂನಿನ ಕ್ರಮವನ್ನು ಪಾಲಿಸಿ, ಲಿಂಗಾಯತರನ್ನು ಸ್ವತಂತ್ರ ಮತ್ತು ಅಲ್ಪಸಂಖ್ಯಾತ ಧರ್ಮಿಯರೆಂದು ಘೋಷಿಸಿದ್ದನ್ನು ಬಲವಾಗಿ ವಿರೋಧಿಸಿತು.

ಆ ವಿರೋಧದಿಂದ ಲಿಂಗಾಯತ ಯುವಕರಿಗೆ ಪ್ರತಿ ವರ್ಷ ಅಲ್ಪಸಂಖ್ಯಾತರ ಖೋಟಾದಲ್ಲಿ ಲಿಂಗಾಯತರ ಮೆಡಿಕಲ್ ಮತ್ತು ಎಂಜಿನಿಯರಿಂಗ, ಮ್ಯಾನಜಮೆಂಟ ಕಾಲೇಜುಗಳಲ್ಲಿ ದೊರೆಯಬಹುದಾದ 5000 ಪದವಿ ಮತ್ತು ಮತ್ತು ಸುಮಾರು 500 ಸ್ನಾತಕೋತ್ತರ ಪದವಿಗಳ ಕೋರ್ಸಗಳಿಂದ ವಂಚಿತರನ್ನಾಗಿ ಮಾಡಿದೆ. ಅಷ್ಟೇ ಪ್ರಮಾಣದಲ್ಲಿ ಲಿಂಗಾಯತ ಸಂಸ್ಥೆಗಳಲ್ಲಿನ ನೌಕರಿಗಳನ್ನೂ ಕಳೆದುಕೊಳ್ಳುವಂತೆ ಮಾಡಿದೆ.

Edited By :
Kshetra Samachara

Kshetra Samachara

30/05/2022 06:49 pm

Cinque Terre

1.67 K

Cinque Terre

0

ಸಂಬಂಧಿತ ಸುದ್ದಿ