ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 2023 ರ ಚುನಾವಣೆ ಯಲ್ಲಿ ಭಾಜಪದ ಕಮಲ ಅರಳುವ ಸಂದೇಶ ಸ್ಪಷ್ಟ; ಸಿ.ಎಂ ಬಸವರಾಜ ಬೊಮ್ಮಾಯಿ

ಜನಸ್ಪಂದನ ಕರ್ನಾಟಕದ ಹಳ್ಳಿ ಹಳ್ಳಿಗೂ, ಮೂಲೆ ಮೂಲೆಗೂ, ಕರ್ನಾಟಕದ ಪ್ರತಿ ತಾಲ್ಲೂಕು, ಕ್ಷೇತ್ರಕ್ಕೆ ಪ್ರಯಾಣಿಸಲಿದೆ.

2023 ರ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ ದ ಕಮಲ ಅರಳುವ ಸಂದೇಶ ಸ್ಪಷ್ಟವಾಗಿ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದರು.

ಅವರು ಇಂದು ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ಆಯೋಜಿಸಿದ್ದ “ ಜನಸ್ಪಂದನ” ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಗಳ ಆನಾವರಣ ಹಾಗೂ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ದಿಟ್ಟ ನಿಲುವಿನಿಂದ ಕೋವಿಡ್ ಸಮರ್ಥ ನಿರ್ವಹಣೆ :

ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಸರಿಯಾದ ಕೋವಿಡ್ ನಿರ್ವಹಣೆಯಾಗದೆ ಚಿಕಿತ್ಸೆ, ಜನರಿಗೆ ಕೆಲಸ ಇರಲಿಲ್ಲ. ಆದರೆ ನಾಯಕರಾದ ಯಡಿಯೂರಪ್ಪನವರ ಅವಧಿಯಲ್ಲಿ ಕೋವಿಡ್ ಸರ್ಮಥ ನಿರ್ವಹಣೆ ಮಾಡಿ, ಚಿಕಿತ್ಸೆ, ಉದ್ಯೋಗವಿಲ್ಲದವರಿಗೆ ಸ್ಪಂದಿಸಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೋವಿಡ್ ಸಮರ್ಥವಾಗಿ ನಿರ್ವಹಿಸಲಾಯಿತು.ಕೇಂದ್ರ ಸರ್ಕಾರದಿಂದ 1 ಲಕ್ಷ ಕೋಟಿ ಅನುದಾನವನ್ನು ನೀಡಲಾಯಿತು. 130 ಕೋಟಿ ಜನಸಂಖ್ಯೆಗೆ 2 ಡೋಸ್ ಲಸಿಕಾಕರಣ ಸಾಧ್ಯವಾಗಿಸಲಾಯಿತು. ಕೇಂದ್ರದಲ್ಲಿ ನರೇಂದ್ರ ಮೋದಿಯವರು ಹಾಗೂ ರಾಜ್ಯದಲ್ಲಿ ಯಡಿಯೂರಪ್ಪನವರ ಆಡಳಿತ ಹಾಗೂ ದಿಟ್ಟ ನಿಲುವಿನಿಂದ ಇದು ಸಾಧ್ಯವಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದರೆ ರಾಜ್ಯವನ್ನು ನರಕಕ್ಕೆ ತಳ್ಳುತ್ತಿದ್ದರು ಎಂದರು.

ಡಬಲ್ ಇಂಜಿನ್ ಸರ್ಕಾರ ನರೇಂದ್ರ ಮೋದಿಯವರ ಆಶೀರ್ವಾದದಿಂದ ಕೇಂದ್ರದ ಹಲವಾರು ಯೋಜನೆಗಳನ್ನು ಸಮಗ್ರವಾಗಿ ಜನ ರಿಗೆ ಮುಟ್ಟಿಸಿ ಅವರ ಆಶಯದಂತೆ ಡಬಲ್ ಇಂಜಿನ್ ಸರ್ಕಾರದ ಲಾಭವನ್ನು ಕರ್ನಾಟಕದ ಜನತೆಗೆ ಮುಟ್ಟಿಸಿ, ವರದಿಯನ್ನು ಸಲ್ಲಿಸುತ್ತೇವೆ. ಆಡಳಿತ ಮಾಡಲು ನಾವು ಯೋಗ್ಯರು ಎನ್ನುವುದನ್ನು ಸಾಬೀತು ಮಾಡಿ, ನಿಮ್ಮ ಪ್ರೀತಿ ವಿಶ್ವಾಸ ಗಳಿಸಲು ಆತ್ಮ ವಿಶ್ವಾಸ ದಿಂದ ನಿಮ್ಮ ಮುಂದೆ ಬಂದು ನಿಲ್ಲುತ್ತೇವೆ. ಆಶೀರ್ವಾದ ಮಾಡಿ ಎಂದರು. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ನಮ್ಮ ಗುರಿ. ಹೆಜ್ಜೆಗೆ ಹೆಜ್ಜೆ , ಹೆಗಲಿಗೆ ಹೆಗಲು ನೀಡಿ ಎಂದು ಕರೆ ನೀಡಿದರು. ಜನಸ್ಪ ದನೆಯನ್ನು ವಿಜಯೋತ್ಸವವಾಗಿ ಪರಿವರ್ತಿಸೋಣ. ಇಲ್ಲಿಂದ ಶಕ್ತಿಯನ್ನು ಇಮ್ಮಡಿಗೊಳಿಸಿಕೊಂಡು ಅದಮ್ಯ ಶಕ್ತಿಯಿಂದ ಕರ್ನಾಟಕದ ಜನರ ಸೇವೆ ಮಾಡಲು ಸಂಕಲ್ಪ ಮಾಡಿದ್ದೇನೆ ಎಂದರು.

Edited By :
PublicNext

PublicNext

10/09/2022 08:37 pm

Cinque Terre

38.67 K

Cinque Terre

0

ಸಂಬಂಧಿತ ಸುದ್ದಿ