ಸಿಎಂ ಬಸವರಾಜ್ ಬೊಮ್ಮಾಯಿ ಪಕ್ಷ ಸಂಘಟನೆ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಬಿಎಸ್ ವೈ ಭೇಟಿಯಾಗಿದ್ದಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮನ ಮತ್ತು ಜನೋತ್ಸವ ಹಾಗೂ ರಾಜ್ಯಲ್ಲಿ ಪ್ರವಾಸ ಕೈಗೊಳ್ಳುವ ಬಗ್ಗೆ ಬಿಎಸ್ ವೈ ಜೊತೆ ಸಿಎಂ ಚರ್ಚೆ ನಡೆಸಿದ್ದಾರೆ.
ಇನ್ನು, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ವಿಚಾರವಾಗಿ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಡಿ.ಸಿ. ಗಳ ಜೊತೆ ವೀಡಿಯೊ ಕಾನ್ಫರೆನ್ಸ್ ನಡೆಸಿದ್ದೇನೆ. ಬೆಂಗಳೂರು- ಮೈಸೂರು ಪರ್ಯಾಯ ಮಾರ್ಗವನ್ನು ಬದಲಾಯಿಸಿ ಎಂದು ನಿನ್ನೆಯೇ ಸೂಚಿಸಿದ್ದೇನೆ. ನ್ಯಾಷನಲ್ ಹೈವೇ ಅಥಾರಿಟಿ ಜೊತೆ ಸಭೆ ನಡೆಸಲು ಸಿಎಸ್ ಗೆ ಸೂಚಿಸಿದ್ದೇನೆ. ಎಲ್ಲಾ ಡಿ.ಸಿ. ಗಳಿಗೆ ಮನೆ ಕುಸಿತ ಪ್ರಕರಣಗಳಲ್ಲಿ ಪರಿಹಾರಕ್ಕೆ ಸೂಚಿಸಿದ್ದೇನೆ. ಕೆರೆ ಕಟ್ಟೆಗಳ ಬಗ್ಗೆ ಎಚ್ಚರ ವಹಿಸಿ ಎಂದು ಸೂಚಿಸಿದ್ದೇನೆ. ಕ್ರಾಪ್ ಲಾಸ್ ಬಗ್ಗೆ ಮುಂದಿನ ವಾರದಲ್ಲಿ ಪರಿಹಾರ ನೀಡುತ್ತೇವೆ. ಪರಿಹಾರ ಕೊಡೋದ್ರಲ್ಲಿ ಹಿಂದೆ ಮುಂದೆ ನೋಡದೆ ನೀಡಲು ಸೂಚಿಸಿದ್ದೇನೆ.
ವಿದ್ಯುತ್ ಕಂಬಗಳು ಬಿದ್ದಿದ್ದರೆ ತಕ್ಷಣ ತೆರವು ಮಾಡಬೇಕು. ಯಾವ ಹಳ್ಳಿಗೂ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದೇನೆ. ಅಷ್ಟೇ ಅಲ್ಲದೆ, ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನೀರು ನಿಂತಿದ್ದು, ಕ್ಲಿಯರ್ ಮಾಡಲು ಜೊತೆಗೆ ಪರ್ಯಾಯ ವಾಹನ ಸಂಚಾರಕ್ಕೆ ಸೂಚನೆ ನೀಡಿದ್ದೇನೆ. ಬೆಂಗಳೂರಿಂದ ಮೈಸೂರು ವರೆಗೂ ಅಧಿಕಾರಿಗಳಿಗೆ ಸಮನ್ವಯತೆ ಸಾಧಿಸಿ ಕೆಲಸ ಮಾಡುವಂತೆ ಹೇಳಿದ್ದೇವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತ ನೀರನ್ನು ಹೊರಗೆ ಹಾಕಲು ಕ್ರಮ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
PublicNext
29/08/2022 12:50 pm