ಮೊನ್ನೆ ಕಾಂಗ್ರೆಸ್ ಕೈಗೊಂಡ ಪಾದಯಾತ್ರೆಯನ್ನು ಫೋನ್ ಮೂಲಕ ಎರಡು ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ಒಂದು ದೂರವಾಣಿ ಕ್ರಾಂತಿಯನ್ನು ಮಾಡಿದ್ದು ರಾಜೀವ್ ಗಾಂಧಿ. ಅಂದು ಅವರು ಕೈಗೊಂಡ ನಿಲುವು ಇಂದು ಮಹಾನ್ ಕ್ರಾಂತಿಗೆ ಕಾರಣವಾಗಿದೆ. ನೆಹರು ಫೋಟೋ ತೆಗೆದು ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಕೊಂಡಿದ್ದಾರೆ.
ಬೊಮ್ಮಾಯಿ ಬಿಜೆಪಿಯ ಹಾಗೂ ಆರ್ ಎಸ್ ಎಸ್ ನಾಯಕರ ಮೂಲಕ ಸರ್ಟಿಫಿಕೇಟ್ ಪಡೆಯುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ನ ಹಿರಿಯ ನಾಯಕರು ಕೊಡುಗೆ ಏನು ಎನ್ನುವುದು ಇವರಿಗೆ ತಿಳಿದಿಲ್ಲ. ಕೈಗೆ ಬಂದ ಅಧಿಕಾರವನ್ನು ಕಾಂಗ್ರೆಸ್ ಸಾಧಕರು ಬಿಟ್ಟುಕೊಟ್ಟಿದ್ದಾರೆ. ತ್ಯಾಗ ಬಲಿದಾನ ಸೇವೆ ಮಾಡಿದ ಕುಟುಂಬದ ಇತಿಹಾಸವನ್ನು ಕಿತ್ತು ಹಾಕಲು ಬೊಮ್ಮಾಯಿ ಹೊರಟಿದ್ದಾರೆ. ಇದು ಸಾಧ್ಯವಿಲ್ಲ.
ರಾಜೀವ್ ಗಾಂಧಿ ನೀಡಿದ ಸಾರ್ಕ್ ರಾಷ್ಟ್ರಗಳ ಬಾಂಧವ್ಯ ವನ್ನ ಬಿಜೆಪಿ ಸರ್ಕಾರ ಸಂಪೂರ್ಣ ಹಾಳು ಮಾಡಿದೆ. ಬಿಜೆಪಿಯವರು ಯಾಕೆ ಕಳೆದ ೨ ವರ್ಷದಿಂದ ಬಿಬಿಎಂಪಿ ಚುನಾವಣೆ ಮಾಡುತ್ತಿಲ್ಲ? ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಮಾನ್ಯತೆ ನೀಡಿದೆ. ಚಿಕ್ಕಪೇಟೆ ಸರ್ಕಾರಿ ಶಾಲೆಯನ್ನೇ ಬಿಜೆಪಿ ಸರ್ಕಾರ ವ್ಯಾಪಾರಕ್ಕೆ ಇಟ್ಟಿದೆ.
ಸರ್ಕಾರದ ಆಸ್ತಿಯನ್ನು ಹಾಳು ಮಾಡುವ ಕಾರ್ಯ ಮಾಡುತ್ತಿವೆ. ದೇಶದಲ್ಲಿ ಇಂತಹ ಸರ್ಕಾರದ ವಿರುದ್ಧ ಹುಷಾರಾಗಿರಿ. ನಿರ್ಲಕ್ಷ್ಯ ವಹಿಸಿ ನಿದ್ರೆಗೆ ಜಾರಬೇಡಿ. ಕಾಂಗ್ರೆಸ್ ಪಕ್ಷದ ಹೆಸರು ಹೇಳಿಕೊಂಡು ಬಲವರ್ಧನೆಗೆ ಪ್ರಯತ್ನ ಮಾಡಿ. ಭಾರತವನ್ನು ಒಗ್ಗೂಡಿಸಬೇಕು ಎಂದು ರಾಹುಲ್ ಗಾಂಧಿ ಪಾದಯಾತ್ರೆ ನಡೆಸುತ್ತಿದ್ದಾರೆ.
ಕರ್ನಾಟಕದಲ್ಲಿ 21 ದಿನ ನಡೆಯುವ ಈ ಪಾದಯಾತ್ರೆ ಸಂದರ್ಭ ಅವರೊಂದಿಗೆ ನೀವು ಹೆಜ್ಜೆ ಹಾಕಿ. ಪಕ್ಷದ ಕಾರ್ಯಕರ್ತರು ಜನರಿಗೆ ಐಕ್ಯತೆಯ ಮಾಹಿತಿ ತಲುಪಿಸಿ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಬಿಜೆಪಿಯವರನ್ನ ತರಾಟೆಗೆ ತೆಗೆದುಕೊಂಡರು.
PublicNext
20/08/2022 06:05 pm