ಸದ್ಯ ಶಿವಮೊಗ್ಗದ ಬೆಳವಣಿಗೆಗಳು ರಾಜ್ಯದ ಶಾಂತಿಯನ್ನು ಕದಡುತ್ತಿವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಇತಿಹಾಸ ಪುರುಷರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಬಾರದು. ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ವಯಸ್ಸಾಗಿದೆ. 60ಕ್ಕೆ ಅರಳೋ ಮರಳೋ.! ಈಗವರಿಗೆ 75ವರ್ಷ. ಏನ್ ಮಾತಾಡ್ತಿದ್ದೀನಿ ಎನ್ನುವ ಪರಿಜ್ಞಾನ ಅವರಿಗಿಲ್ಲ.
ಇತಿಹಾಸ ಗೊತ್ತಿರುವವರು ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡಲ್ಲ. ಸಿದ್ದು ನೆಗೆಟಿವ್ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಇನ್ನು ಹರಿಪ್ರಸಾದ್ ಯಥಾ ರಾಜ ತಥಾ ಪ್ರಜ ಎಂಬಂತೆ ಮಾತಾಡ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆಗಳಿಗೆ ವಿಶ್ವನಾಥ್ ಟಾಂಗ್ ನೀಡಿದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..
PublicNext
16/08/2022 03:58 pm