ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು ಪ್ರಜೆ ಮತ್ತು ಪ್ರತಿನಿಧಿಗಳ ಆಶಯದಂತೆ ನಾವು ಮುನ್ನಡೆಯುತ್ತೇವೆ. ಕಳೆದ ತಿಂಗಳ 28ಕ್ಕೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಮಾಡಬೇಕಿತ್ತು. ಕಾರಣಾಂತರಗಳಿಂದ ಕಾರ್ಯಕ್ರಮ ರದ್ದಾಗಿತ್ತು. ಮತ್ತೆ ಜನರ ಒತ್ತಾಯದ ಮೇರೆಗೆ ಇದೇ ಆಗಸ್ಟ್ 28ಕ್ಕೆ ಜನೋತ್ಸವ ಮಾಡ್ತಿದ್ದೇವೆ. ಮುಖ್ಯಮಂತ್ರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರು.
ಬಿಜೆಪಿ ಸರ್ಕಾರದ ಮೂರು ವರ್ಷಗಳ ಅಭಿವೃದ್ಧಿ ಕೆಲಸಗಳ ರಿಪೋರ್ಟ್ ಕಾರ್ಡನ್ನ ಜನರ ಮುಂದಿಡುವ ಕೆಲಸ ಜನೋತ್ಸವದಲ್ಲಿ ಆಗಲಿದೆ. ದೇವನಹಳ್ಳಿಲಿ ಹರ್ ಘರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಡಾ.ಸುಧಾಕರ್ ಮಾತನಾಡಿದರು.
PublicNext
13/08/2022 07:38 pm