ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಯಿಂದ ಧರೆಗುರುಳಿದ ಮರ- ಅಂಗಡಿ, 2 ಆಟೋ ಜಖಂ

ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ‌ ಚಾಮರಾಜಪೇಟೆ ವ್ಯಾಪ್ತಿಯ ಅಜಾದ್ ನಗರದಲ್ಲಿ ಮರವೊಂದು ಧರೆಗುರುಳಿದ ಪರಿಣಾಮ ಎರಡು ಆಟೋ, ಒಂದು ಗೂಡ್ಸ್ ವಾಹನ ಸೇರಿ ಅಂಗಡಿ ಮುಂಗಟ್ಟು ಜಖಂ ಆಗಿವೆ. ಇಂದು ದುರಂತ ಸ್ಥಳಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಭೇಟಿ ನೀಡಿ, ಆಟೋ ಮತ್ತು ಗೂಡ್ಸ್ ಗಾಡಿ ಕಳೆದುಕೊಂಡು ಕಂಗಾಲಾಗಿದ್ದ ಬಡವರಿಗೆ ವೈಯಕ್ತಿಕವಾಗಿ ಒಂದೂವರೆ ಲಕ್ಷ ನಗದು ಪರಿಹಾರ ವಿತರಿಸಿದರು.

ಸಾರ್ವಜನಿಕ ರಸ್ತೆ ಆದ್ದರಿಂದ ಸರ್ಕಾರದ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಕಂಗಾಲಾಗಿದ್ದ ಬಡ ದಿನಗೂಲಿ ವ್ಯಾಪಾರಿಗಳಿಗೆ ಜೀವನಕ್ಕೆ ಅನುಕೂಲ‌ ಆಗಲಿ ಎಂದು ಆಟೋ ಕಳೆದುಕೊಂಡ ಇಬ್ಬರಿಗೆ ತಲಾ ಐವತ್ತು ಸಾವಿರ ರೂಪಾಯಿ, ಗೂಡ್ಸ್ ವಾಹನ ಮತ್ತು ಅಂಗಡಿ ಕಳೆದುಕೊಂಡ ಮೂವರಿಗೆ ತಲಾ 15,000 ರೂ.ದಂತೆ ಜಮೀರ್ ಅಹ್ಮದ್ ಖಾನ್ ಪರಿಹಾರ ವಿತರಿಸಿದರು. ಕಷ್ಟದಲ್ಲಿದ್ದ ತಮಗೆ ಶಾಸಕರು ಜಮೀರ್ ನೆರವಾಗಿದ್ದಾರೆ ಎಂದು ಸಂತ್ರಸ್ತರು ಕೃತಜ್ಞತೆ ಸಲ್ಲಿಸಿದರು.

Edited By :
PublicNext

PublicNext

29/07/2022 06:47 pm

Cinque Terre

37.08 K

Cinque Terre

1

ಸಂಬಂಧಿತ ಸುದ್ದಿ