ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಶ್ರೀಧರ್ ಆಯ್ಕೆಯಾಗಿದ್ದಾರೆ.
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಧರ್, ಉಪಾಧ್ಯಕ್ಷ-ಆನಂದ್ ಬೈದನಮನೆ, ಪ್ರಧಾನ ಕಾರ್ಯದರ್ಶಿ- ಮಲ್ಲಪ್ಪ, ಕಾರ್ಯದರ್ಶಿ- ದೊಡ್ಡ ಬೊಮ್ಮಯ್ಯ, ಸಹಕಾರ್ಯದರ್ಶಿ- ಮಹಾಂತೇಶ್, ಹಾಗೂ ಖಜಾಂಚಿ- ಮೋಹನ್ ಆಯ್ಕೆಯಾಗಿದ್ದಾರೆ. ಪ್ರೆಸ್ ಕ್ಲಬ್ ಸಮಿತಿ ಸದಸ್ಯರಾಗಿ ಮೊದಲ ಬಾರಿಗೆ ಜಿ.ಗಣೇಶ್, ಆಲ್ಫ್ರೆಡ್, ಮುನಿರಾಮೇಗೌಡ, ಯಾಸಿರ್, ಸೋಮಣ್ಣ ಹಾಗೂ ಮಹಿಳಾ ಸದಸ್ಯರಾಗಿ ರೋಹಿಣಿ ಹಾಗೂ ಮಿನಿ ತೇಜಸ್ವಿನಿ ಗೆಲುವಿನ ನಗೆ ಬೀರಿದ್ದಾರೆ.
ಅಧ್ಯಕ್ಷರಾದ ಶ್ರೀಧರ್ ಅವರು 302 ಮತ ಪಡೆದರೆ, ಕಮಿಟಿ ಸದಸ್ಯೆ ರೋಹಿಣಿ ಅವರು ಅತಿ ಹೆಚ್ಚು 307 ಮತ ಪಡೆದಿದ್ದಾರೆ. ಎರಡನೇ ಅತಿ ಹೆಚ್ಚು ಸ್ಥಾನ ಅಂದರೆ 286 ಮತಗಳನ್ನ ಗಣೇಶ್ ಅವರು ಪಡೆಯುವ ಶುಭಾರಂಭ ಮಾಡಿದ್ದಾರೆ.
PublicNext
12/06/2022 06:34 pm