ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ʼಎಚ್‌ ಡಿಕೆʼ ಮಳೆ ಹಾನಿ ವೀಕ್ಷಣೆ; CM ಸಹಿತ ವಿಶ್ವನಾಥ್, ಕೃಷ್ಣ ಭೈರೇಗೌಡರಿಗೆ ತರಾಟೆ

ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಹಾನಿ ವೀಕ್ಷಣೆ ಹೆಸರಲ್ಲೂ ರಾಜಕೀಯ ಶುರುವಾಯ್ತಾ !? ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ C.M. ಬೊಮ್ಮಾಯಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. ಬಿಜೆಪಿ ನಂತರ ಮೊನ್ನೆ ಕಾಂಗ್ರೆಸ್ ನ ಸಿದ್ದು & ಟೀಮ್, ಇಂದು JDS ಕುಮಾರಸ್ವಾಮಿ & ಟೀಮ್ ಬೆಂಗಳೂರು ಉತ್ತರದ ಹೆಬ್ಬಾಳ, ಯಲಹಂಕ & ಬ್ಯಾಟರಾಯನಪುರ ಕ್ಷೇತ್ರದ ಮಳೆ ಹಾನಿ ಪ್ರದೇಶದ ಪರಿಶೀಲನೆ ನಡೆಸಿತು.

ಜಲ ದಿಗ್ಬಂಧನದಲ್ಲಿದ್ದ ಯಲಹಂಕದ ಕೋಗಿಲು ಸರ್ಕಲ್ ನ ಕೇಂದ್ರೀಯ ವಿಹಾರ ಅಪಾರ್ಟ್‌ ಮೆಂಟ್‌ ಗೆ HDK ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಸ್ಥಳೀಯರ ಅಹವಾಲು ಸ್ವೀಕರಿಸಿದ ಬಳಿಕ ಬಿಲ್ಡಿಂಗ್ ಡೆಮೋಲಿಷನ್ ಮಾಡಿಸ್ತೀರಾ !? ಸರ್ಕಾರ & ಶಾಸಕರು ತಮ್ಮ ಮನೆಯಿಂದ ದುಡ್ಡು ತಂದು ಕೆಲಸ ಮಾಡಿಸುತ್ತಿದ್ದೀರಾ ! ದುರಾಲೋಚನೆ, ಸಣ್ಣತನ, ಪಾಳೆಗಾರಿಕೆ ಬಿಡಬೇಕೆಂದು ಯಲಹಂಕ ಶಾಸಕ ವಿಶ್ವನಾಥ್ ಗೆ ಟಾಂಗ್ ಕೊಟ್ಟರು. ಸ್ಥಳೀಯರೂ HDK ಮಾತಿಗೆ ಧ್ವನಿಗೂಡಿಸಿದರು.

Byte:- HD ಕುಮಾರಸ್ವಾಮಿ, JDS ರಾಜ್ಯಾಧ್ಯಕ್ಷ

Byte: ಹೇಮರಾಜ್, ಯಲಹಂಕ JDS ಮುಖಂಡ

ಬ್ಯಾಟರಾಯನಪುರ ಕ್ಷೇತ್ರದ ನಾಗವಾರ ರಿಂಗ್ ರೋಡ್ ಜಂಕ್ಷನ್, ಥಣಿಸಂದ್ರ, ಹೆಬ್ಬಾಳ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಲ್ಲಿ ಇಂದು ಪರಿಶೀಲನೆ ನಡೆಸಿದರು. ಬ್ಯಾಟರಾಯನಪುರದಲ್ಲಿ ತೀರ ಕಳಪೆ ಕಾಮಗಾರಿ ಎದ್ದು ಕಾಣ್ತಿದೆ. 5 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಬಿಬಿಎಂಪಿ ಸಹ ಕಾಂಗ್ರೆಸ್ ತೆಕ್ಕೆಯಲ್ಲಿದ್ದಾಗ ಇಲ್ಲಿನ‌ ಶಾಸಕ ಕೃಷ್ಣ ಭೈರೇಗೌಡ ಮಂತ್ರಿಯಾಗಿದ್ದರು. ಇದೇನಾ ಇವರ ಅಭಿವೃದ್ಧಿ ಆಡಳಿತ ಎಂದು ಕೃಷ್ಣ ಭೈರೇಗೌಡರನ್ನು ಕುಮಾರಸ್ವಾಮಿ ತರಾಟೆಗೆತ್ತಿಕೊಂಡರು.

Byte: HD ಕುಮಾರಸ್ವಾಮಿ, JDS ರಾಜ್ಯಾಧ್ಯಕ್ಷ

ಇಂದು ಬೆಳಗ್ಗೆಯಿಂದ HDK & ಟೀಮ್ ಬೆಂಗಳೂರು ಉತ್ತರದಲ್ಲಿ ಮಳೆಯಿಂದ ಹಾನಿಗೊಳಗಾದ 3 ವಿಧಾನಸಭೆ ಕ್ಷೇತ್ರದ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳ ಪರಿಶೀಲನೆ ನಡೆಸಿದರು. ಶರವಣ, ರಮೇಶ್ ಗೌಡ, ಮುಂಗಾರು ಮಳೆ ಇ.ಕೃಷ್ಣಪ್ಪ, ಗಂಗಾಧರಯ್ಯ ಮೊದಲಾದ ಜೆಡಿಎಸ್‌ ಪ್ರಮುಖರು ಸಾಥ್ ನೀಡಿದರು.

Edited By : Shivu K
Kshetra Samachara

Kshetra Samachara

22/05/2022 09:09 am

Cinque Terre

5.34 K

Cinque Terre

1

ಸಂಬಂಧಿತ ಸುದ್ದಿ