ಬೆಂಗಳೂರು: ಬೆಂಗಳೂರು ನಗರದಲ್ಲಿ ತಡರಾತ್ರಿ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಕಡೆ ಅವಾಂತರ ಸೃಷ್ಟಿಯಾಗಿದೆ. ಇನ್ನು ರಾಜಕಾಲುವೆ ಒತ್ತುವರಿ ಮತ್ತು ಕಟ್ಟಿಕೊಂಡ ಕಸ ಕಡ್ಡಿಯಿಂದಾಗಿ ರಾಜಕಾಲುವೆ, ಚೇಂಬರ್‌ಗಳು ಬ್ಲಾಕ್‌ನಿಂದಾಗಿ ಟಿ.ದಾಸರಹಳ್ಳಿಯ ಹಲವೆಡೆ ಮತ್ತು ಜಂಟಿ ಅಯುಕ್ತ ಜಗದೀಶ್, ವಾರ್ಡ್ ಇಂಜಿನಿಯರ್ ಸೇರಿದಂತೆ ಅಧಿಕಾರಿ ತಂಡದೊಂದಿಗೆ ಟಿ.ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಸ್ಥಳ ಪರಿಶೀಲನೆ ನೆಡೆಸಿದರು.
ಇನ್ನು ನೆಲಗದರನಹಳ್ಳಿಯ ರುಕ್ಮಿಣಿ ನಗರದ ರಾಜಕಾಲುವೆಯಿಂದ ತಗ್ಗು ಪ್ರದೇಶದ ಹಲವು ಮನೆಗಳಿಗೆ ಕೊಳಚೆ ಮಳೆ ನೀರು ನುಗ್ಗಿದ ಪರಿಣಾಮ ಸ್ಥಳ ಪರಿಶೀಲನೆಗೆ ಬಂದ ಶಾಸಕ ಆರ್.ಮಂಜುನಾಥ್ ಅವರಿಗೆ ಸ್ಥಳೀಯರು ಘೇರಾವ್ ಹಾಕಿದರು. 'ನಿಮ್ಮ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮನೆಗಳಿಗೆ ನೀರು ತುಂಬಿದೆ. ನೋಡಿ ಸ್ವಾಮಿ ನಮ್ಮ ಗತಿ ಏನಾಗಿದೆ ಅಂತ. ಯಾವಾಗ ಸಮಸ್ಯೆ ಬಗೆಹರಿಸ್ತೀರಿ, ಮನೆ ತುಂಬೆಲ್ಲಾ ನೀರು ರಾತ್ರಿಯಲ್ಲ ಜಾಗರಣೆ. ನಮ್ಮ ಸಮಸ್ಯೆ ಯಾರು ಕೇಳೋರಿಲ್ಲ. ಮಳೆ ನೀರು ನುಗ್ಗಿದ ಕಡೆಯಲೆಲ್ಲ ರೌಂಡ್ ಹೊಡೆಯೋದು ಪರಿಹಾರ ಅಲ್ಲ. ಸದ್ಯ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಮಾಡಿ ಕೊಡಿ ಎಂದು ಸ್ಥಳೀಯರ ಕಿಡಿ ಕಾಡಿದ್ರು, ಹೀಗಾಗಿ ಸ್ಥಳದಲೇ ಬಿಬಿಎಂಪಿ ಅಧಿಕಾರಿಗಳಿಗೆ ಮಂಜುನಾಥ್ ತರಾಟೆಗೆ ತೆಗೆದುಕೊಂಡರು.
ಬಳಿಕ ಮಾಧ್ಯಮದೊಂದಿಗೆ ಶಾಸಕ ಆರ್. ಮಂಜುನಾಥ್ ಮಾತನಾಡಿ, ಬೆಂಗಳೂರು ನಗರದಲ್ಲಿ ಭಾರಿ ಮಳೆಯಿಂದಾಗಿ ದಾಸರಹಳ್ಳಿ ಕ್ಷೇತ್ರದ ಕೆಲ ಬಡಾವಣೆಗಳಲ್ಲಿ ಸಾಕಷ್ಟು ಆವಾಂತರ ಸೃಷ್ಟಿ ಆಗಿದೆ. ಹಲವು ಬಾರಿ ರಾಜಕಾಲುವೆ ಟೆಂಡರ್ ಕರೆದಿದ್ದರು. ಅದನ್ನೂ ತಡೆ ಹಿಡಿದಿದ್ದಾರೆ. ನಮ್ಮ ಕ್ಷೇತ್ರದಲ್ಲಿ ರಾಜಕಾಲುವೆ ಬ್ಲಾಕ್ ದೊಡ್ಡ ಸಮಸ್ಯೆ, ರೆವಿನ್ಯೂ ಜಾಗ ಸಾಕಷ್ಟು ಒತ್ತುವರಿಯಾಗಿದೆ. ಒತ್ತುವರಿ ತೆರವುಗೊಳಿಸಿ ತಡೆಗೋಡೆ ನಿರ್ಮಾಣ ಮಾಡಬೇಕು. ಈ ಸಮಸ್ಯೆ ಬಗ್ಗೆ ನಾಲ್ಕು ವರ್ಷಗಳಿಂದ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುತ್ತಲೇ ಇದೀನಿ ಸಮಸ್ಯೆ ಬಗೆಹರಿದಿಲ್ಲ. ಕಷ್ಟಪಟ್ಟು ಟೆಂಡರ್ ಹಂತಕ್ಕೆ ತಂದಾಗ ತಡೆ ನೀಡುತ್ತಾರೆ. ಸರ್ಕಾರ ನಮ್ಮ ಕಡೆ ಗಮನ ಹರಿಸಿಲ್ಲವೆಂದು ಜನರೆದುರು ಅಳಲು ತೊಡಗಿಕೊಂಡರು.
Kshetra Samachara
18/05/2022 10:36 pm