ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸುಸ್ಥಿರ ಗಣಿಗಾರಿಕೆಗೆ ಸಮಗ್ರ ಯೋಜನೆ ರೂಪಿಸಲು ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು: ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ನವರು ಸುಸ್ಥಿರ ಗಣಿಗಾರಿಕೆಗೆ ಸಮಗ್ರ ಯೋಜನೆ ರೂಪಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ವತಿಯಿಂದ ಸುವರ್ಣ ಮಹೋತ್ಸವ ಕಾರ್ಯಾಗಾರ-2022 ಉದ್ಘಾಟಿಸಿ ಮಾತನಾಡಿದರು.

ಗಣಿಗಾರಿಕೆಯಿಂದ ಪ್ರಕೃತಿ ಮೇಲಿನ ದಾಳಿ ನಿಲ್ಲಬೇಕು. ಮುಂದಿನ 50 ವರ್ಷಗಳಲ್ಲಿ ಸುಸ್ಥಿರ ಗಣಿಗಾರಿಕೆಯಿಂದ ಹಂತಹಂತವಾಗಿ ಖನಿಜಗಳ ಬಳಕೆ ಹಾಗೂ ಅರಣ್ಯ ಬೆಳೆಸುವ ಯೋಜನೆ ರೂಪಿಸಬೇಕು. ಖನಿಜಗಳ ಸಮತೋಲಿತ ಬಳಕೆ ಬಗ್ಗೆ ಗಮನ ಹರಿಸಬೇಕೆಂದರು.

2022-23ರ ಬಜೆಟ್ ನಲ್ಲಿ ಅರಣ್ಯ ಜೀವಿಶಾಸ್ತ್ರ ವ್ಯವಸ್ಥೆ ಮೇಲಿನ ದಾಳಿ, ದುಷ್ಪರಿಣಾಮ ಸರಿದೂಗಿಸಲು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಹಸಿರು ಆಯವ್ಯಯ ರೂಪಿಸಿ 100 ಕೋಟಿ ಅನುದಾನ ಮೀಸಲಿಡಲಾಗಿದೆ‌.

ನಿಸರ್ಗ ಮತ್ತು ಮನುಷ್ಯ ಸೃಷ್ಟಿಯ ಭಾಗ. ಗಣಿಗಾರಿಕೆಯ ತ್ಯಾಜ್ಯ ಈಗಿನ ತಂತ್ರಜ್ಞಾನದಿಂದ ಉಪಯುಕ್ತ ಸಂಪತ್ತಾಗಿದೆ. ಹಿಂದಿನವರು ನಿಸರ್ಗದ ಗಣಿ ಸಂಪತ್ತನ್ನು ಉಳಿಸಿಕೊಂಡು ಬಂದಿದ್ದಾರೆ. ಭವಿಷ್ಯಕ್ಕೆ ಈ ಸಂಪತ್ತನ್ನು ಕಾಪಿಡಬೇಕಿದೆ. ಆದ್ದರಿಂದ ಸುಸ್ಥಿರ ಗಣಿಗಾರಿಕೆಗೆ ಹೆಚ್ಚು ಒತ್ತು ನೀಡಬೇಕೆಂದರು.

ಒರಿಸ್ಸಾ, ಜಾರ್ಖಂಡ್, ಪಶ್ಚಿಮ ಬಂಗಾಳದ ಪ್ರದೇಶದಲ್ಲಿ ಟಾಟಾ ಕಂಪನಿ ಮೈನ್ಸ್ ನವರು ಸುಸ್ಥಿರ ಗಣಿಗಾರಿಕೆ ಮಾಡಿ, ಆ ಪ್ರದೇಶವನ್ನು ಅರಣ್ಯೀಕರಣ ಮಾಡಿ ಪ್ರಕೃತಿನ ಸಂರಕ್ಷಿಸಿರುವ ನಿದರ್ಶನವನ್ನು ಮುಖ್ಯಮಂತ್ರಿಗಳು ನೀಡಿದರು.

ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದರು.

ಸುರೇಶ್ ಬಾಬು 'ಪಬ್ಲಿಕ್ ನೆಕ್ಸ್ಟ್' ಬೆಂಗಳೂರು

Edited By :
PublicNext

PublicNext

28/03/2022 10:00 pm

Cinque Terre

36.16 K

Cinque Terre

0

ಸಂಬಂಧಿತ ಸುದ್ದಿ