ವರದಿ: ಬಲರಾಮ್ ವಿ.
ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ರೂತ್ ಮೇರಿ ಸಗಾಯಿ ಎಂಬ ಕಾಂಗ್ರೆಸ್ ಕಾರ್ಯಕರ್ತೆಯ ಮೇಲೆ ದರ್ಪ ತೋರಿದ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಹಾಗೂ ಮಹಿಳೆಯ ಮೇಲೆ ಹಾಕಲಾಗಿರುವ ಎಫ್ ಐ ಆರ್ ರದ್ದುಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನ ನೂರಾರು ಕಾರ್ಯಕರ್ತರು ವೈಟ್ ಫೀಲ್ಡ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ಕೆಪಿಸಿಸಿ ವಕ್ತಾರೆ ಎಂ.ಕಮಲಾಕ್ಷಿ ರಾಜಣ್ಣ, "ಶಾಸಕರ ಅವಾಚ್ಯ ಹೇಳಿಕೆಯು ತಮ್ಮ ಆರ್ ಎಸ್ ಎಸ್ ಹಾಗೂ ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ. ರೇಪ್ ಎಂಬ ಶಾಸಕರ ಹೇಳಿಕೆ ತಮಗೆ ಮತ ನೀಡಿದ ಕ್ಷೇತ್ರದ ಮಹಿಳೆಯರೆಲ್ಲರಿಗೂ ಅನ್ವಯಿಸುತ್ತದೆ.
ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ದಂಧೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಒಬ್ಬ ಜನಪ್ರತಿನಿಧಿಯಾಗಿ ಈ ತರಹದ ಪದ ಬಳಕೆ ಮಾಡೋದು ಸರಿಯೇ?" ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೆ ಮಹಿಳೆಯ ವಿರುದ್ಧ ದಾಖಲಾದ ದೂರನ್ನು ರದ್ದುಪಡಿಸುವಂತೆ ಆಗ್ರಹಿಸಿದರು.
PublicNext
04/09/2022 08:27 pm