ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಕಚೇರಿಯ ಗ್ರಾಮ ಲೆಕ್ಕಾಧಿಕಾರಿ ಲೋಕೇಶ್ ಮತ್ತು ಆರ್‌ಆರ್‌ಟಿ ಸೆಕ್ಷನ್ ಅಧಿಕಾರಿ ಶಶಿಕಲಾ ಅವರ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಮಿತಿಮೀರಿದೆ ಎಂದು ರೈತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರ ಅನ್ಯಾಯವನ್ನು ಖಂಡಿಸಿ ರೈತ ಸಹೋರರಿಬ್ಬರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದ ಶಶಿಧರ್ ಮತ್ತು ಸಹೋದರ ಇಬ್ಬರೂ ದೇವನಹಳ್ಳಿ ತಾಲ್ಲೂಕು ಕಚೇರಿ ಪ್ರವೇಶ ದ್ವಾರದ ಬಳಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಈ ಮೂಲಕ ಪೌತಿ ಖಾತೆ ಮಾಡದೆ ಸತಾಯಿಸುತ್ತಿರುವ ವಿ.ಎ ಶಶಿಧರ್ & ಆರ್‌ಆರ್‌ಟಿ ಸೆಕ್ಷನ್‌ನ ಶಶಿಕಲಾ ಅವರಿಂದ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಬೈಚಾಪುರ ಗ್ರಾಮದ ರೈತ ಶಶಿಧರ್ ಅವರ ತಂದೆ ಮುನಿಯಲ್ಲಪ್ಪ ಕಾಲವಾದ ನಂತರ ತಾಯಿ ಲಕ್ಷ್ಮಮ್ಮ ಹೆಸರಿಗೆ ಬೈಚಾಪುರ ಗ್ರಾಮದ ಸರ್ವೆ ನಂಬರ್ 17/1,2,3ರ ಜಮೀನಿನ ಪೌತಿ ಖಾತೆಗೆ ಅರ್ಜಿ ಸಲ್ಲಿಸಿದ್ದರು. ತಿಂಗಳುಗಳಾದರೂ ಪೌತಿ ಖಾತೆಯಾಗಿರಲಿಲ್ಲ. ಅನೇಕ ತಿಂಗಳುಗಳ ಹೋರಾಟ- ಓಡಾಟದ ಫಲವಾಗಿ 3 ಸರ್ವೆ ನಂಬರ್‌ಗಳಲ್ಲಿ ಎರಡು ನಂಬರ್ ಖಾತೆಯಾಗಿದೆ. 17/1,2, 3 ಈ ಒಂದು ನಂಬರ್ ಖಾತೆ ಆಗಿರಲಿಲ್ಲ.
ಈ ಬಗ್ಗೆ ಶಶಿಧರ್ ಸಂಪೂರ್ಣ ದಾಖಲೆ ಕಲೆ ಹಾಕಿದಾಗ ಯಾವುದೇ ತಕರಾರು ಅರ್ಜಿ ಇಲ್ಲದಿದ್ದರೂ, ತಕರಾರಿದೆ ಎಂದು ದಾಖಲೆಗಳಲ್ಲಿ ತೋರಿಸಿ ಬಚಾವಾಗಿದ್ದರು. ಡಿ.ಸಿ, ಎ.ಸಿ ಮತ್ತು ತಹಶೀಲ್ದಾರ್ ಅವರು ಶಶಿಧರ್ ಪರ ಮಾತನಾಡಿ, ಪೌತಿ ಖಾತೆಗೆ ಸೂಚಿಸಿದ್ದರು. ಗ್ರಾಮ ಲೆಕ್ಕಾಧಿಕಾರಿ ಲೋಕೇಶ್ ಮತ್ತು ಆರ್‌ಆರ್‌ಟಿ ಸೆಕ್ಷನ್ ಶಶಿಕಲಾ ಉದ್ದೇಶಪೂರ್ವಕವಾಗಿ ಮೇಲಾಧಿಕಾರಿಗಳಿಗೆ ತಿಳಿಸಿ ತೇಜೋವದೆ ಮಾಡಿದ್ದಾರೆ ಎಂಬ ಜಿದ್ದಿಗೆ ಬಿದ್ದು, ಪೌತಿ ಖಾತೆ ಮಾಡುತ್ತಿಲ್ಲ . ಆದ್ದರಿಂದ ಭ್ರಷ್ಟ ಅಧಿಕಾರಿಗಳ ಕರ್ತವ್ಯಲೋಪದ ವಿರುದ್ಧ ಅಹೋರಾತ್ರಿ ಧರಣಿ ನಡೆಸುತ್ತಿರುವುದಾಗಿ ಶಶಿಧರ್ ಪಬ್ಲಿಕ್ ನೆಕ್ಸ್ಟ್ ಗೆನವಿ ಮಾಡಿದ್ದಾರೆ.
Kshetra Samachara
14/06/2022 11:08 pm