ಬೆಂಗಳೂರು: ಆರ್.ಟಿ.ನಗರ ನಿವಾಸಿ ಬಿಡಿಎ ಮೋಹನ್ ಮನೆ ಮೇಲೆ ದಾಳಿ ನಂತರ ಮಾಧ್ಯಮಗಳಿಗೆ ಮೋಹನ್ ಪ್ರತಿಕ್ರಿಯೆ ನೀಡಿದ್ದಾರೆ. 'ನನ್ನ ಮೇಲೆ ಯಲಹಂಕ ಶಾಸಕ,ಬಿಡಿಎ ಅಧ್ಯಕ್ಷ ವಿಶ್ವನಾಥ್ ದಾಳಿ ಮಾಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ನಾನು ಬಿಡಿಎ ಕಡೆಗೆ ಹೋಗೋದೇ ಇಲ್ಲ. ವಿಶ್ವನಾಥ್ ಮೇಲೆ ಈ ಹಿಂದೇನೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದೆ. ಆ ಕಾರಣಕ್ಕಾಗಿ ಒಂದೂವರೆ ವರ್ಷದಿಂದ ಟಾರ್ಗೆಟ್ ಮಾಡ್ತಿದ್ದಾರೆ. ನಾನು ರಿಯಲ್ ಎಸ್ಟೇಟ್ ಏಜೆಂಟ್,ನನ್ನದೇ ಆದಾಯವಿದೆ. ಇನ್ ಕಮ್ ಟ್ಯಾಕ್ಸ್ ಕೂಡ ನಾನು ಪಾವತಿಸಿದ್ದೇನೆ. ಬೆಳೆಯುತ್ತಿರೋದನ್ನ ತುಳಿಯೋದಕ್ಕೆ ಈ ಕೃತ್ಯ ಮಾಡ್ತಿದ್ದಾರೆ. ವಿಶ್ವನಾಥ್ ಜೊತೆಗೆ ಖಾಸಗಿ ಟಿವಿಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಕೂಡ ನನ್ನ ಟಾರ್ಗೆಟ್ ಮಾಡಿದ್ದಾರೆ.
ಮನೆಯೊಳಗೆ ಏನು ಸಿಕ್ಕಿಲ್ಲ. ಸಿಕ್ಕಿರೋದಕ್ಕೆ ದಾಖಲೆ ನೀಡಿದ್ದೇನೆ. ಮೂರು ವರ್ಷದಿಂದ ಬಿಡಿಎಗೆ ಹೋಗುತ್ತಿಲ್ಲ. ಸೀನಿಯರ್ ಲೀಡರ್ ನಮ್ಮಂತಹವರ ಮೇಲೆ ಯಾಕೆ ದ್ವೇಷ ಸಾಧಿಸುತ್ತಿದ್ದಾರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಬಳಿ ಐದು ಕೋಟಿಯಷ್ಟು ಆಸ್ತಿಯಿದೆ.ಮನೆಯಲ್ಲಿ 5 ಕೆಜಿ ಚಿನ್ನ ಸಿಕ್ಕ ವಿಚಾರ ಸಂಬಂಧ ನಾನು 15 ವರ್ಷದಿಂದ ಚಿನ್ನ ಖರೀದಿಸಿದ್ದೇನೆ.ನಾನು ಕಾನೂನಾತ್ಮಕವಾಗಿದ್ದೇನೆ. ವಿಶ್ವನಾಥ್ ಕುಮ್ಮಕ್ಕಿನಿಂದ ಈ ದಾಳಿಯಾಗಿದೆ. ಕಾನೂನು ಹೋರಾಟ ಮಾಡ್ತೇನೆ ಎಂದರು.
PublicNext
22/03/2022 03:21 pm