ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣೆ ಮುತ್ತಿಗೆ‌; ಇನ್ಸ್ಪೆಕ್ಟರ್ ವಸಂತ್‌ವಿರುದ್ಧ ಆರೋಪ

ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವಸಂತ್ ಮೇಲೆ ಸಾಲು ಸಾಲು ಆರೋಪಗಳು ಕೇಳಿ ಬರ್ತಿವೆ. ಕೆಲ ದಿನಗಳ ಹಿಂದಷ್ಟೇ ಮಹಿಳೆ ಮೇಲೆ ಸುಳ್ಳು ಕೇಸ್ ದಾಖಲಿಸಿ ಧಮ್ಕಿ ಹಾಕಿದ್ದ ಆರೋಪ ಮಾಸುವ ಮೊದಲೇ ಮತ್ತೊಂದು ಆರೋಪ ಕೇಳಿ ಬಂದಿದೆ.

ಗೆದ್ದಲಹಳ್ಳಿ ‌ನಿವಾಸಿಯಾಗಿರುವ ಸಾವಿತ್ರಮ್ಮ ಜಾಗದ ವಿಚಾರವಾಗಿ ವಿಜಯ್ ಕುಮಾರ್ ಎಂಬಾತನ ವಿರುದ್ಧ ಕೆಲ ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನ ಸ್ವೀಕರಿಸಿದ ಇನ್ ಸ್ಪೆಕ್ಟರ್ ವಸಂತ್, ಎಫ್ಐಆರ್ ಮಾಡದೇ ಆರೋಪಿ ಜೊತೆಗೆ ದೂರುದಾರರ ಮನೆಗೆ ಹೋಗಿ ದೂರು ವಾಪಸ್ ಪಡೆಯುವಂತೆ ಧಮ್ಕಿ ಹಾಕಿದ್ದಾರೆ ಎಂದು ಮಹಿಳೆ ಅರೋಪಿಸಿದ್ದಾಳೆ.

ಈ ಸಂಬಂಧ ದೂರುದಾರರಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆ ಇಂದು ಹೆಣ್ಣೂರು ಪೊಲೀಸ್ ಠಾಣೆ ಮುಂದೆ‌ ಮುತ್ತಿಗೆ ಹಾಕಿದ್ರು. ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು. ಸ್ಥಳಕ್ಕೆ ಡಿಸಿಪಿ ಬರುವಂತೆ ಆಗ್ರಹಿಸಿದರು. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಆಗಮಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಪ್ರತಿಭಟನೆಯನ್ನು ತಿಳಿಗೊಳಿಸಿದರು.

ಇನ್ಸ್ಪೆಕ್ಟರ್ ವಿರುದ್ಧ ಕೇಳಿ ಬಂದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ವರದಿ ನೀಡುವಂತೆ ಡಿಸಿಪಿ ಭೀಮಾಶಂಕರ್ ಬಾಣಸವಾಡಿ ವಿಭಾಗದ ಎಸಿಪಿಗೆ ತಾಕೀತು ಮಾಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

07/02/2022 04:42 pm

Cinque Terre

708

Cinque Terre

0

ಸಂಬಂಧಿತ ಸುದ್ದಿ