ಬೆಂಗಳೂರು: ಏಷ್ಯಾದಲ್ಲೇ ಅತಿ ದೊಡ್ಡ ವಕೀಲರ ಸಂಘ ಎನಿಸಿಕೊಂಡಿರುವ ಬೆಂಗಳೂರು ವಕೀಲರ ಸಂಘಕ್ಕೆ ವಿವೇಕ್ ಸುಬ್ಬಾರೆಡ್ಡಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಘಕ್ಕೆ ನಡೆದ ಚುನಾವಣೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿಯಿಂದ 1900ಕ್ಕೂ ಅಧಿಕ ಮತಗಳ ಅಂತರದಿಂದ ವಿವೇಕ್ ಜಯಭೇರಿ ಬಾರಿಸಿದ್ದಾರೆ.
ಈ ಅಧಿಕಾರಾವಧಿ 2021ರಿಂದ 2024ರವರೆಗೆ ಇರಲಿದೆ. ಸಂಘದ 16568 ನೋಂದಾಯಿತ ಮತದಾರರಲ್ಲಿ ಸುಮಾರು ಹನ್ನೊಂದುವರೆ ಸಾವಿರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ನಿನ್ನೆ ರವಿವಾರ ಮತದಾನ ಪ್ರಕ್ರಿಯೆ ನಡೆದಿತ್ತು.
ಅಧ್ಯಕ್ಷ ಸ್ಥಾನಕ್ಕೆ ಚಲಾವಣೆಯಾದ ಮತಗಳಲ್ಲಿ ಒಟ್ಟು 4,804 ಮತಗಳು ವಿವೇಕ್ ಸುಬ್ಬಾರೆಡ್ಡಿ ಅವರಿಗೆ ಒಲಿದು ಜಯ ಸಾಧಿಸಿದ್ದಾರೆ. ಇವರ ಸಮೀಪದ ಅಭ್ಯರ್ಥಿ ಎ.ಪಿ ರಂಗನಾಥ್ ಅವರಿಗೆ 2,894 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
Kshetra Samachara
20/12/2021 06:22 pm