ಬೆಂಗಳೂರು: ವಿದ್ಯುತ್ ದರ ಏರಿಕೆಯಿಂದ ಹೋಟೆಲ್ ಉದ್ಯಮಿಗಳು ಮತ್ತು ಗ್ರಾಹಕರು ಕಂಗಾಲಾಗಿದ್ದರೆ. ಕೇವಲ 6 ತಿಂಗಳ ಹಿಂದೆ ಅಷ್ಟೇ ವಿದ್ಯುತ್ ದರ 35 ಪೈಸ್ ಹೆಚ್ಚಿಸಿದರೆ, ಈಗ ಮತ್ತೆ 43 ಪೈಸ್ ಹೆಚ್ಚಿಸಿರುವುದರಿಂದ ಹೊಡೆತ ಬಿದ್ದಿದೆ ಎಂದು ಹೋಟೆಲ್ ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಇದೇ ವಿಷಯವಾಗಿ ಮಾತನಾಡಿದ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಈಗ ಹೊರಡಿಸಿರುವ ಆದೇಶವನ್ನ ಸರ್ಕಾರ ತಕ್ಷಣ ಹಿಂಪಡೆಯಬೇಕು. ವಿದ್ಯುತ್ ದರದ ಮೇಲೆ ಇರುವಂತಹ 9% ತೆರಿಗೆಯನ್ನ 5% ಇಳಿಸಬೇಕು. ಮುಂದಿನವಾರ ಸಚಿವರನ್ನ ಭೇಟಿಯಾಗಿ ಮನವಿ ಮಾಡುವುದಾಗಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಹೇಳಿದ್ದಾರೆ.
PublicNext
25/09/2022 12:35 pm